Thursday, August 6, 2026

BDA Apartments

Home Front Page ವಿಚಾರಣೆಗೆ ಹಾಜರಾಗಲು ಸಮಯ ಮೀಸಲು: ನಾಳಿನ ಸಿಎಂ ಪರಿಷ್ಕೃತ ಪ್ರವಾಸ ಪಟ್ಟಿ ಬಿಡುಗಡೆ

ವಿಚಾರಣೆಗೆ ಹಾಜರಾಗಲು ಸಮಯ ಮೀಸಲು: ನಾಳಿನ ಸಿಎಂ ಪರಿಷ್ಕೃತ ಪ್ರವಾಸ ಪಟ್ಟಿ ಬಿಡುಗಡೆ

ಬೆಂಗಳೂರು,ನವೆಂಬರ್,5,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲು   ನಾಳೆ  ಸಿಎಂ  ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ನಾಳಿನ ಪರಿಷ್ಕೃತ ಪ್ರವಾಸ ಪಟ್ಟಿ ಬಿಡುಗಡೆಯಾಗಿದ್ದು ಲೋಕಯುಕ್ತ ವಿಚಾರಣೆ ಸಮಯವನ್ನ ಸಿಎಂ ಸಿದ್ದರಾಮಯ್ಯ ನಿಗದಿ ಮಾಡಿಕೊಂಡಿದ್ದಾರೆ. ನಾಳೆ ಮೈಸೂರಿಗೆ ರಸ್ತೆ ಮೂಲಕ 9.30 ಕ್ಕೆ ಮೈಸೂರಿಗೆ  ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ  12 ಗಂಟೆಗೆ ಮತ್ತೆ ಚನ್ನಪಟ್ಟಣ ಪ್ರವಾಸಕ್ಕೆ ತೆರಳುವುದಾಗಿ ಪ್ರವಾಸ ಪಟ್ಟಿಯಲ್ಲಿ ನಮೂದು ಮಾಡಲಾಗಿದೆ.

ಈ ಮಧ್ಯೆ ಲೋಕಾಯುಕ್ತ ತನಿಖೆಗೆ ಹಾಜರಾಗುವುದಾಗಿ ಪ್ರವಾಸ ಪಟ್ಟಿಯಲ್ಲಿ ನಮೂದಿಸಿಲ್ಲ. ಆದರೆ ಎರಡೂವರೆ ತಾಸನ್ನು ವಿಚಾರಣೆಗೆ ಸಿಎಂ ಸಿದ್ದರಾಮಯ್ಯ ಮೀಸಲಿರಿಸಿದ್ದಾರೆ. ಸಿಎಂ ಪ್ರವಾಸ ಪಟ್ಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Key words: muda case, hearing, CM Siddaramaiah, mysore