Saturday, August 8, 2026

BDA Apartments

Home Front Page ಅಬಕಾರಿ ಇಲಾಖೆಯಲ್ಲಿ 500 ಕೋಟಿ ರೂ. ಲೂಟಿ: ಸಚಿವ ತಿಮ್ಮಾಪುರ ವಜಾಗೊಳಿಸಿ- ಆರ್ ಅಶೋಕ್ ಆ‍ಗ್ರಹ

ಅಬಕಾರಿ ಇಲಾಖೆಯಲ್ಲಿ 500 ಕೋಟಿ ರೂ. ಲೂಟಿ: ಸಚಿವ ತಿಮ್ಮಾಪುರ ವಜಾಗೊಳಿಸಿ- ಆರ್ ಅಶೋಕ್ ಆ‍ಗ್ರಹ

ಬೆಂಗಳೂರು,ನವೆಂಬರ್,5,2024 (www.justkannada.in): ಅಬಕಾರಿ ಇಲಾಖೆಯಲ್ಲಿ ₹500 ಕೋಟಿ ಲೂಟಿ ಮಾಡಲಾಗಿದೆ. ಈ ಕೂಡಲೇ ಸಚಿವ ಸ್ಥಾನದಿಂದ ಆರ್.ಬಿ ತಿಮ್ಮಾಪುರ ವಜಾಗೊಳಿಸಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್  ಆಗ್ರಹಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಅಬಕಾರಿ ಇಲಾಖೆಯಲ್ಲಿ ₹500 ಕೋಟಿ ಲೂಟಿ! ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೂಂದು ಕರಾಳ ಅಧ್ಯಾಯ ಬಹಿರಂಗಗೊಂಡಿದ್ದು, ರಾಜ್ಯ ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ ₹15 ಕೋಟಿ ರೂಪಾಯಿಯಂತೆ ವರ್ಷಕ್ಕೆ ₹180 ಕೋಟಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರನ್ನು ಬದಲಾಯಿಸಲು ಕೋರಿದ್ದಾರೆ.

ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ ‘ಮಂಥ್ಲಿ ಮನಿ’ ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಗ್ರಹಿಸುತ್ತೇನೆ ಎಂದು ಟ್ವೀಟ್ ಮೂಲಕ ಆರ್.ಆಶೋಕ್ ಒತ್ತಾಯಿಸಿದ್ದಾರೆ.

Key words: Looting, ₹500 crore,  Excise Department, R Ashok