Sunday, August 9, 2026

BDA Apartments

Home Front Page ಇಂದು ಮೈಸೂರಿನಲ್ಲಿ ಅತಿಹೆಚ್ಚು ಪಾಸಿಟಿವ್ ಕೇಸ್ – ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್…

ಇಂದು ಮೈಸೂರಿನಲ್ಲಿ ಅತಿಹೆಚ್ಚು ಪಾಸಿಟಿವ್ ಕೇಸ್ – ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್…

ಮೈಸೂರು,ಜು,1,2020(www.justkannada.in): ಮೈಸೂರಿನಲ್ಲಿಂದು ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬರಲಿದೆ. ಇದು ಈವರೆಗೆ ಬಂದ ನಂಬರ್‌ಗಳಲ್ಲೆ ಅತಿ ಹೆಚ್ಚು ಇರಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ದಿನೆ ದಿನೆ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ನಾವು ಸಕಲ ರೀತಿಯಲ್ಲು ಸಜ್ಜಾಗಿದ್ದೇವೆ. ನರ್ಸ್ ಹಾಗೂ ಡಿ.ಗ್ರೂಪ್ ನೌಕರರ ಕೊರತೆ ಇದೆ. ಕೋವಿಡ್ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳೆ ಬೇರೆ ಬೇರೆ ಕೆಲಸ ಮಾಡುವ ಸ್ಥಿತಿ ಬಂದಿದೆ. ನಾವು ಹೆಚ್ಚು ಹೆಚ್ಚು ಸ್ಯಾಂಪಲ್ ಸಂಗ್ರಹ ಮಾಡ್ತಿದ್ದೀವಿ. ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣ ಹೆಚ್ಚಾಗಿದೆ. ILI ಹಾಗೂ SARI ಪ್ರಕರಣ ಹೆಚ್ಚಾಗಿವೆ. ಈ ಬಗ್ಗೆ ಟ್ರಾವಲ್ ಹಿಸ್ಟರಿ ಕಂಡುಹಿಡಿಯುವ ಕೆಲಸ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕಿತರ ಪಕ್ಕದಲ್ಲೆ ಸಾಮಾನ್ಯ ರೋಗಿ ಇದ್ದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜೀ ಶಂಕರ್, ಇದು ನನ್ನ ಗಮನಕ್ಕೆ ಬಂದಿದೆ. ಇದು ಕೇವಲ ಕೆ.ಆರ್.ಆಸ್ಪತ್ರೆ ಅಲ್ಲ ಎಲ್ಲ ಕಡೆ ಇದೆ. ಈ ಸಮಸ್ಯೆ ಗಂಭೀರ ಸಮಸ್ಯೆ ಅಲ್ಲ. ಆಸ್ಪತ್ರೆಗೆ ದಾಖಲಾಗುವ ಎಲ್ಲರನ್ನು ಟೆಸ್ಟ್ ಮಾಡ್ತಿವಿ. ಅದರಲ್ಲಿ ಸೋಂಕಿತರು ಅಂತ ಗೊತ್ತಾದ ತಕ್ಷಣ ಅವರನ್ನ ಶಿಫ್ಟ್ ಮಾಡ್ತಿವಿ. ಆ ಸೋಂಕಿತರನ್ನ ಶಿಫ್ಟ್ ಮಾಡುವ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳು ಇದ್ದೀರಬಹುದು. ಇದನ್ನ ತಾಂತ್ರಿಕವಾಗಿ ನಿಯಂತ್ರಣ ಮಾಡೋದು ಕಷ್ಟ ಎಂದು ಸ್ಪಷ್ಟನೆ ನೀಡಿದರು.most-positive-case-today-mysore-dc-abhiram-ji-shankar

ILI ಹಾಗೂ  SARI ಕೇಸ್ ಗೊತ್ತಾಗೋದೆ ಕೆ.ಆರ್.ಆಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ. ಬಂದ ಪೇಷಂಟ್‌ಗಳನ್ನ ತಕ್ಷಣ ಸೋಂಕಿತರು ಎಂದು ಗುರುತಿಸೋಕೆ ಆಗೋಲ್ಲ. ಟೆಸ್ಟ್ ಮಾಡಿ ರಿಸಲ್ಟ್ ಬಂದ ಮೇಲೆ ಅವರನ್ನ ಶಿಫ್ಟ್ ಮಾಡ್ತಿವಿ. ಹಾಗಂತ ಸಾಮಾನ್ಯ ರೋಗಿನ ಅವರಿಂದ  ತಕ್ಷಣ ಬೇರೆ ಮಾಡೋಕೆ ಆಗೋಲ್ಲ. ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗೋವರೆಗು ಕಾಯಬೇಕಾಗುತ್ತದೆ. ಇನ್ಮುಂದೆ ಆ ಕೆಲಸ ಬೇಗ ಮಾಡುವಂತೆ ಸಿಬ್ಬಂದಿಗೆ ಸೂಚನೆ ಕೊಡುತ್ತೇನೆ ಎಂದು ಡಿಸಿ ಅಭಿರಾಂ ಜೀ ಶಂಕರ್ ತಿಳಿಸಿದರು.

key words:  most positive –case- today-mysore-DC- Abhiram Ji Shankar