ಮೈಸೂರಿನಲ್ಲಿ ಪತ್ರಿಕಾ ದಿನಾಚಾರಣೆ: ಪತ್ರಕರ್ತರ ಭವನದ ನೂತನ ವ್ಯಾಯಾಮ ಶಾಲೆ ಕಟ್ಟಡ ಉದ್ಘಾಟಿಸಿದ ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಜು,1,2020(www.justkannada.in):  ಇಂದು ಪತ್ರಿಕಾ ದಿನಾಚಾರಣೆ ಹಿನ್ನೆಲೆ ಮೈಸೂರು ಪತ್ರಕರ್ತರ ಭವನದ ನೂತನ ವ್ಯಾಯಾಮ ಶಾಲೆ ಕಟ್ಟಡವನ್ನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟನೆ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಇಂದು ಪತ್ರಿಕಾ ದಿನಾಚಾರಣೆ ಆಚರಣೆ ಮಾಡಲಾಯಿತು. ಈ  ವೇಳೆ ವ್ಯಾಯಾಮ ಶಾಲೆ ಉದ್ಘಾಟನೆ, ಅಭಿನಂದನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

ಅಂದಾಜು 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪತ್ರಕರ್ತರ ಭವನದ ನೂತನ ವ್ಯಾಯಾಮ ಶಾಲೆ ಕಟ್ಟಡವನ್ನ  ಸಚಿವ ಎಸ್ ಟಿ ಸೋಮಶೇಖರ್ ಉದ್ಘಾಟಿಸಿದರು. ಇದೇ ವೇಳೆ ಮಾಧ್ಯಮ ಕ್ಷೇತ್ರಕ್ಕೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಸುಧರ್ಮ ಪತ್ರಿಕೆಯ ಸಂಪತ್ ಕುಮಾರ್ ಉಪಸ್ಥಿತಿರಿದ್ದರು.

ಕಾರ್ಯಕ್ರಮದಲ್ಲಿ ಪ್ರಜಾನುಡಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಡಿ.ಮಹದೇವಪ್ಪ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸುಧರ್ಮಾ ಸಂಸ್ಕೃತ ದಿನಪತ್ರಿಕೆ  ಪ್ರಧಾನ ಸಂಪಾದಕರಾದ ಸಂಪತ್ ಕುಮಾರ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಸನ್ಮಾನ ಮಾಡಲಾಯಿತು.press-day-mysore-minister-st-somashekhar-press-club

ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಸಿ. ಕೆ. ಮಹೇಂದ್ರರಿಂದ ಉಸ್ತುವಾರಿ ಪತ್ರಕರ್ತರ ಹಾಗೂ ಪತ್ರಕರ್ತರ ಸಂಘದ ಸಮಸ್ಯೆಗಳನ್ನು ಪರಿಹರಿಸುವಂತೆ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಂ. ಕೆ. ಸೋಮಶೇಖರ್, ವಾಸು, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಅಂಶಿ ಪ್ರಸನ್ನಕುಮಾರ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು, ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Key words: Press Day-mysore-Minister- ST Somashekhar- press club