ಮೈಸೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ: ಕೋವಿಡ್ ಆಸ್ಪತ್ರೆ ಬೆಡ್ ಗಳ  ಹೆಚ್ಚಳಕ್ಕೆ ಮುಂದಾದ ಜಿಲ್ಲಾಡಳಿತ….

ಮೈಸೂರು,ಜು,1,2020(www.justkannada.in): ಮೈಸೂರಿನಲ್ಲಿ ದಿನೇ ದಿನೇ  ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆ ಬೆಡ್ ಗಳನ್ನು ಹೆಚ್ಚಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಉಸ್ತುವಾರಿ ಸಚಿವರ ಸಭೆ ನಡೆಯಿತು. ಈ ವೇಳೆ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ವೈಧ್ಯಾಧಿಕಾರಿಗಳಿಂದ ಸಲಹೆ ನೀಡಿದರು.corona-increase-mysore-kovid-hospital-beds-minister-st-somashekar

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 250ಬೆಡ್ ಗಳು ಮೀಸಲಿಡಲಾಗಿದ್ದು, ಏರ್ಪೋರ್ಟ್ ಬಳಿ ಕೆಎಸ್ಓಯು ಕಟ್ಟಡದಲ್ಲಿ 500ಬೆಡ್ ಗಳು ರೆಡಿ ಇವೆ.  ಇಎಸ್ಐ ಆಸ್ಪತ್ರೆಯಲ್ಲಿ 100, ಕೆಎಸ್ಒಯು ಕಟ್ಟಡದಲ್ಲಿ 120, ಟ್ರಾಮ ಸೆಂಟರ್ ನಲ್ಲಿ 120ಬೆಡ್ ಗಳು ಮೀಸಲು ಇಡಬೇಕು.

ಇನ್ನು ‘ಎ’ ಸಿಮ್ಟಮಿಟಿಕ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಕ್ವಾರಂಟೈನ್  ಮಾಡಬೇಕು. ಇನ್ಮುಂದೆ ಕೋವಿಡ್ ಸೀರ್ಯಸ್ ಆದ  ಪ್ರಕರಣಗಳನ್ನು ಆಸ್ಪತ್ರೆಗೆ ರವಾನಿಸುವಂತೆ ಸಭೆಯಲ್ಲಿ ಸಚಿವರಿಗೆ ವೈಧ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

Key words: Corona- Increase – Mysore- Kovid Hospital –Beds-minister- ST Somashekar