ತೇಜಸ್ವಿನಿ ಅನಂತಕುಮಾರ್​​ ಅವರಿಗೂ ಟಿಕೆಟ್ ಕೈ ತಪ್ಪಲು ಬಿ.ಎಲ್ ಸಂತೋಷ್ ಕಾರಣ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ವಾಗ್ದಾಳಿ.

ಹುಬ್ಬಳ್ಳಿ,ಏಪ್ರಿಲ್,28,2023(www.justkannada.in): ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಟಿಕೆಟ್​ ಕೈತಪ್ಪಲು ಬಿ.ಎಲ್​.ಸಂತೋಷ್ ಕಾರಣ. ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್​​ ಗೂ ಆಗಿದೆ. ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್​ ಒನ್​ ನಾಯಕನಾಗುತ್ತಿದ್ದೆ, ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತರ ಮಾಡಿದರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್  ಗುಡುಗಿದರು.

ಇಂದು ಮಾತನಾಡಿದ ಜಗದೀಶ್ ಶೆಟ್ಟರ್, ಲಿಂಗಾಯತ ನಾಯಕತ್ವವಿಲ್ಲದೆ ಸರ್ಕಾರ ರಚಿಸಿದ್ದನ್ನು ತೋರಿಸಬೇಕಿತ್ತು. ಆ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿದೆ. ಶೆಟ್ಟರ್ ನಾಯಕತ್ವ ಮುಗಿಸಲು ಷಡ್ಯಂತ್ರ ನಡೆಯುತ್ತಿತ್ತು. ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತಾ ನನ್ನ‌ ವಿರುದ್ಧ ನೆಗೆಟಿವ್ ಪ್ರಚಾರ ನಡೆಸಿದರು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಬಿ.ಎಲ್​.ಸಂತೋಷ್​ ವಿರುದ್ಧ ಮಾತನಾಡಿದ್ದಕ್ಕೆ ಇದೆಲ್ಲ ಆಗುತ್ತಿದೆ. ಇಡೀ ದೇಶದಲ್ಲಿ ಬಿ.ಎಲ್​.ಸಂತೋಷ್ ವಿರುದ್ಧ ಮಾತಾಡಿದ್ದು ನಾನೇ ಎಂದರು.

Key words: BJP-BL Santhosh-Former CM-Jagadish shetter