ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಬುಕ್ಕಿಗಳ ಬೆನ್ನು ಹತ್ತಿದ ಪೊಲೀಸರು

ಬೆಂಗಳೂರು, ನವೆಂಬರ್ 04, 2019 (www.justkannada.in): ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಾಲ್ವರು ಬುಕ್ಕಿಗಳ ಬೆನ್ನು ಹತ್ತಿದ್ದಾರೆ. ಈ ನಾಲ್ವರು ಬುಕ್ಕಿಗಳಿಂದ ಫಿಕ್ಸಿಂಗ್ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಸಿಸಿಬಿಯಿಂದ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ತನಿಖೆ ಶುರುವಾಗ್ತಿದ್ದಂತೆ ಬುಕ್ಕಿಗಳು ವಿದೇಶಗಳಿಗೆ ಎಸ್ಕೇಪ್ ಆಗಿದ್ದಾರೆ. ಓರ್ವ ಬುಕ್ಕಿ ದುಬೈಗೆ, ಮತ್ತೋರ್ವ ವೆಸ್ಟ್ ಇಂಡೀಸ್​​ಗೆ ಪರಾರಿಯಾಗಿದ್ದು. ಇನ್ನಿಬ್ಬರು ಬುಕ್ಕಿಗಳು ಸಹ ವಿದೇಶಕ್ಕೆ ಹಾರಿದ್ದಾರೆ. ಈ ಹಿನ್ನೆಲೆ ಅವರ ಶೋಧಕ್ಕಾಗಿ ಸಿಸಿಬಿ LOC- ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದೆ.

ನಾಲ್ವರು ಬುಕ್ಕಿಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ದೇಶದ ಎಲ್ಲಾ ಏರ್ಪೋರ್ಟ್​​ಗಳಲ್ಲಿ ಎಲ್‌ಒಸಿ ಜಾರಿ ಮಾಡಲಾಗಿದೆ.