ಸಿದ್ದರಾಮಯ್ಯಗೆ ಸವಾಲು: ಅನರ್ಹ ಶಾಸಕರಿಗೂ ನಮಗೂ ಸಂಬಂಧ ಇಲ್ಲ ಎಂದ ಸಿಎಂ ಬಿ.ಎಸ್ ಯಡಿಯೂರಪ್ಪ…

ಬೆಂಗಳೂರು,ನ,4,2019(www.justkannada.in): ನೀವು ಮತ್ತು ರಮೇಶ್ ಕುಮಾರ್ ಷಡ್ಯಂತ್ರ ಮಾಡಿ 17 ಮಂದಿ ಶಾಸಕರನ್ನ ಅನರ್ಹಗೊಳಿಸಿದ್ದೀರಿ. ಉಪಚುನಾವಣೆ ಬರ್ತಿದೆ. ತಾಕತ್ತಿದ್ರೆ ಚುನಾವಣೆ ಎದುರಿಸಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ,  ಅನರ್ಹ ಶಾಸಕರ ರಾಜೀನಾಮೆಗೆ ಕಾರಣ ಸಿದ್ದರಾಮಯ್ಯನವರ. 17 ಜನ ಶಾಸಕರು ರಾಜೀನಾಮೆ ಕೊಡೋದಕ್ಕೆ ನೀವೇ ಕಾರಣ. ಶಾಂತಿವನದದಲ್ಲಿ ಕುಳಿತು ಈ ಬಗ್ಗೆ ಮಾತನಾಡಿದ್ದೀರ ನೀವು. ನಾವು ನಿಮ್ಮ ಮಾತನ್ನು ಸಂಯಮದಿಂದ ಕೇಳ್ತಿದ್ದೇವೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

ಅನರ್ಹ ಶಾಸಕರಿಗೂ ನಮಗೂ ಸಂಬಂಧ ಇಲ್ಲ

ಅನರ್ಹ ಶಾಸಕರಿಗೂ ನಮಗೂ ಸಂಬಂಧ ಇಲ್ಲ. ಅವರು ಯಾವ ಪಕ್ಷ ಸೇರ್ತಾರೋ ಗೊತ್ತಿಲ್ಲ. ಪಕ್ಷೇತರ ನಿಲ್ತಾರೋ ಗೊತ್ತಿಲ್ಲ. ರಾಜೀನಾಮೆ ಕೊಟ್ಟಿರುವ 17 ಶಾಸಕರ  ಜೊತೆ ನೀವೇ ಮಾತಾನಾಡಿ ಸಿದ್ದರಾಮಯ್ಯನವರೇ ನೀವೆ ಕರೆದುಕೊಂಡು ಬನ್ನಿ ಎಂದು ಸಿಎಂ ಬಿಎಸ್ ವೈ ಹೇಳಿದರು.

ಇಂದು ಸುಪ್ರೀಂಕೋರ್ಟ್ ಗೆ ಅಪರೇಷನ್ ಕಮಲ ಬಗ್ಗೆ ಆಡಿಯೋ ಸಲ್ಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ,  ಸುಪ್ರೀಂಕೋರ್ಟ್ ಗೆ ಗೊಂದಲ ಹುಟ್ಟಿಸುವ ಕೆಲಸ ಮಾಡಬೇಡಿ. ಆಡಿಯೋ ವಿಷಯದಲ್ಲಿ ಕಾಂಗ್ರೆಸ್ ಆರೋಪಗಳು ಸತ್ಯಕ್ಕೆ ದೂರವಾಗಿದೆ. ನಾನು ಅವರು ಆರೋಪ ಮಾಡಿದ ಹಾಗೆ ಮಾತಾಡಿಲ್ಲ. ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಸಂಚು. ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಮಾನ  ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಆಡಿಯೋ ರೆಕಾರ್ಡ್ ಮಾಡಿದವರು ಯಾರು  ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಸಿಎಂ ಬಿಎಸ್ ವೈ, ನಮ್ ಸಭೆಯಲ್ಲಿ ನಡೆದ ಚರ್ಚೆಯೇ ಬೇರೆ. ಆಡಿಯೋ ಮಾಡಿದವರು ಯಾರು ಅನ್ನೋ ಪ್ರಶ್ನೆಯೇ ಉದ್ಭವಿಸಲ್ಲ. ಆದ್ರೆ ಈ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಡಿಸ್ತಿದೆ ಎಂದು ವಾಗ್ದಾಳಿ ನಡೆಸಿದರು.

 

Key words: Challenge – Siddaramaiah- CM BS Yeddyurappa – no relation-with- Disqualified MLA