ಆರನೇ ವಿಶ್ವ ಪ್ರಶಸ್ತಿ ಗೆದ್ದ ಲೆವಿಸ್ ಹ್ಯಾಮಿಲ್ಟನ್

ವಾಷಿಂಗ್ಟನ್, ನವೆಂಬರ್ 04, 2019 (www.justkannada.in): ಖ್ಯಾತ ಫಾರ್ಮುಲಾ 1 ರೇಸರ್ ಲೆವಿಸ್ ಹ್ಯಾಮಿಲ್ಟನ್ ತಮ್ಮ ಆರನೇ ವಿಶ್ವ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಅಮೆರಿಕನ್ ಗ್ರಾಂಡ್ ಪ್ರಿಕ್ಸ್‌ನಲ್ಲಿ ಮರ್ಸಿಡೆಸ್ ಬೆಂಝ್ ತಂಡದ ವಲ್ಟೆರಿ ಬೊಟ್ಟಾಸ್ ಅವರ ನಂತರ ಎರಡನೆಯವರಾಗಿ ಸ್ಪರ್ಧೆ ಮುಗಿಸಿದರೂ, ಆರನೇ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಗ್ರಿಡ್‌ನಲ್ಲಿ ಐದನೆಯವಾಗಿ ಸ್ಪರ್ಧೆ ಆರಂಭಿಸಿದ 34 ವರ್ಷದ ಹ್ಯಾಮಿಲ್ಟನ್, ಅಪೂರ್ವ ಬದ್ಧತೆಯಿಂದ ಹೋರಾಡಿದರೂ ಅಗ್ರಸ್ಥಾನ ಸಂಪಾದಿಸಲು ಸಾಧ್ಯವಾಗಲಿಲ್ಲ.

ಎರಡು ಬಾರಿ ಮುನ್ನಡೆಯಲ್ಲಿದ್ದರೂ, ಮೂರು ಲ್ಯಾಪ್‌ಗಳಿರುವಾಗ ಬೊಟ್ಟಾಸ್ ಅವರು ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿದರು. ಅಂತಿಮವಾಗಿ 150ನೇ ಬಾರಿ ಪೋಡಿಯಂಗೇರುವ ಸಾಧನೆ ಮಾಡಿದ ಹ್ಯಾಮಿಲ್ಟನ್ ಸತತ 31ನೇ ಬಾರಿ ಅಂಕ ಸಂಪಾದನೆಯೊಂದಿಗೆ ರೇಸ್ ಕೊನೆಗೊಳಿಸಿದರು.