ಪೊಲೀಸ್ ಠಾಣೆ ಎದುರು ಏಕಾಂಗಿ ಪ್ರತಿಭಟನೆ: ಸಿ.ಟಿ ರವಿ ಮತ್ತು ಸುನೀಲ್ ಕುಮಾರ್ ವಶಕ್ಕೆ.

ಚಿಕ್ಕಮಗಳೂರು/ಬೆಂಗಳೂರು,ಜನವರಿ,4,2024(www.justkannada.in): ಕರ ಸೇವಕ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಸಿಡಿದೆದ್ದಿದ್ದು, ಈ ಮಧ್ಯೆ ಪೊಲೀಸ್ ಠಾಣೆಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸಚಿವರಾದ ಸಿ.ಟಿ ರವಿ ಮತ್ತು ಸುನೀಲ್ ಕುಮಾರ್ ರನ್ನ ಪೊಲೀಸರು ವಶಕ್ಕೆ ಪಡೆದರು.

ನಾನೂ ಕರ ಸೇವಕ ನನ್ನನ್ನೂ ಬಂಧಿಸಿ  ಎಂದು ಚಿಕ್ಕಮಗಳೂರಿನ ಪೊಲೀಸ್ ಠಾಣೆ ಎದುರು ಮಾಜಿ ಶಾಸಕ ಸಿ.ಟಿ ರವಿ ಪೋಸ್ಟರ್ ಹಿಡಿದು ಪ್ರತಿಭಟನೆಗೆ ಕುಳಿತಿದ್ದರು.  ಈ ವೇಳೆ ಸಿಟಿ ರವಿಯನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಟಿ ರವಿಯವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ ಹುಬ್ಬಳ್ಳಿ ಕರಸೇವಕರ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದ  ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದರು.

Key words: Solo protest – police station- CT Ravi – Sunil Kumar -arrested