Wednesday, August 5, 2026

BDA Apartments

Home Front Page ವರ್ಷದ ಕೊನೆಯ ಮನ್​ ಕೀ ಬಾತ್​: ಹೊಸ ವರ್ಷದ ಸಂಭ್ರಮಾಚರಣೆ ನಡುವೆ ಒಮಿಕ್ರಾನ್​ ಆತಂಕ ಮರೆಯಬೇಡಿ...

ವರ್ಷದ ಕೊನೆಯ ಮನ್​ ಕೀ ಬಾತ್​: ಹೊಸ ವರ್ಷದ ಸಂಭ್ರಮಾಚರಣೆ ನಡುವೆ ಒಮಿಕ್ರಾನ್​ ಆತಂಕ ಮರೆಯಬೇಡಿ ಎಂದ ಮೋದಿ

ಬೆಂಗಳೂರು, ಡಿಸೆಂಬರ್ 26, 2021 (www.justkannada.in): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವರ್ಷದ ಕೊನೆಯ ಮನ್​ ಕೀ ಬಾತ್​ನಲ್ಲಿ ಮಾತನಾಡುತ್ತಿದ್ದಾರೆ.

ಈ ವೇಳೆ ಹೊಸ ವರ್ಷದ ಸಂಭ್ರಮಾಚರಣೆ ಕುರಿತು ಮೋದಿ ಮಾತನಾಡಿದರು. ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್​ ನಮ್ಮ ಬಾಗಿಲನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಸಂಭ್ರಮಾಚರಣೆ ಗುಂಗಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಜಾಗತನ್ನು ಕಾಡುತ್ತಿರುವ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ. ಸಾಂಕ್ರಮಿಕವನ್ನು ಮಟ್ಟಹಾಕಲು ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದರು.

ಹೊಸ ವರ್ಷದಲ್ಲಿ ತಮ್ಮ ಜೀವನದಲ್ಲಿ ಮತ್ತಷ್ಟು ಸುಧಾರಣೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಮೋದಿ ಕೋರಿದರು.