ರಸ್ತೆ-ರೈಲು ಹಳಿ ಎರಡರ ಮೇಲೂ ಚಲಿಸುವ ವಿಶ್ವದ ಮೊದಲ ಡ್ಯುಯಲ್ ಮೋಡ್ ವಾಹನ ತಯಾರಿಸಿದ ಜಪಾನ್

ಬೆಂಗಳೂರು, ಡಿಸೆಂಬರ್ 26, 2021 (www.justkannada.in): ರಸ್ತೆ ಮತ್ತು ರೈಲು ಹಳಿ ಎರಡರ ಮೇಲೂ ಚಲಿಸುವ ವಿಶ್ವದ ಮೊದಲ ಡ್ಯುಯಲ್ ಮೋಡ್ ವಾಹನವನ್ನು ಜಪಾನ್ ತಯಾರಿಸಿದೆ.

ಈ ವಾಹನ ಜಪಾನ್‌ನ ಕೈಯೊ ಪಟ್ಟಣದಲ್ಲಿ ರಸ್ತೆಗೆ ಇಳಿದಿದೆ. ಮಿನಿಬಸ್‌ನಂತೆ ಕಾಣುತ್ತದೆ ಮತ್ತು ರಸ್ತೆಯಲ್ಲಿ ಸಾಮಾನ್ಯ ರಬ್ಬರ್ ಟೈರ್‌ಗಳಲ್ಲಿ ಚಲಿಸುತ್ತದೆ.

ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು ಅದು ರೈಲು ಹಳಿಗಳ ಮೇಲೆ ಕೂಡ ಚಲಿಸುತ್ತದೆ. ಮುಂಭಾಗದ ಟೈರ್‌ಗಳನ್ನು ಟ್ರ್ಯಾಕ್‌ನಿಂದ ಮೇಲಕ್ಕೆತ್ತಲಾಗುತ್ತದೆ.

ರೈಲು ಹಳಿಯಲ್ಲಿ ಸುಲಭವಾಗಿ ರೈಲಿನಂತಹ ಮಾಡ್ಯೂಲ್ ಆಗಿ ಪರಿಣಾಮಕಾರಿಯಾಗಿ ಬದಲಾಗುವ ಈ ವೈಶಿಷ್ಟ್ಯವನ್ನು ಈ ವಾಹನ ಹೊಂದಿದೆ.