Thursday, August 6, 2026

BDA Apartments

Home Front Page ಎಂಎಲ್ ಸಿ ಹೆಚ್. ವಿಶ್ವನಾಥ್‌ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪತ್ರ ಚಳುವಳಿ.

ಎಂಎಲ್ ಸಿ ಹೆಚ್. ವಿಶ್ವನಾಥ್‌ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪತ್ರ ಚಳುವಳಿ.

ಮೈಸೂರು,ಮೇ,18,2022(www.justkannada.in):   ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪತ್ರಚಳುವಳಿ ನಡೆಸಲಾಯಿತು.

ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಮಾಜ ಜಾಗೃತ ವೇದಿಕೆ ಅಧ್ಯಕ್ಷ ಹೆಚ್.ಬೀರಪ್ಪ, ಜನಪರ ವೇದಿಕೆ ಅಧ್ಯಕ್ಷ ಎಸ್.ಶಿವಪ್ಪ ನೇತೃತ್ವದಲ್ಲಿ ಪತ್ರ ಚಳುವಳಿ ನಡೆಸಿ ಹೆಚ್. ವಿಶ್ವನಾಥ್‌ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ಹೆಚ್. ವಿಶ್ವನಾಥ್. ಇಂತಹ ಹಲವಾರು ಶಾಶ್ವತ ಜನಪರ ಯೋಜನೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಹಳ್ಳಿಹಕ್ಕಿ. ಸದಾ ಸಮಾಜದ ಒಳಿತಿಗಾಗಿ ಚಿಂತಿಸುವ ಮುತ್ಸದ್ದಿ ಹೆಚ್.ವಿಶ್ವನಾಥ್ ರವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಿ ಮೈಸೂರು ಜಿಲ್ಲೆಯ ಉಸ್ತುವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಪ್ರಗತಿಪರ ಚಿಂತಕರ ಪ್ರಶಾಂತ್ ಆರ್ಯ ಸಲ್ಮಾನ್, ಜೀವಿತ್, ಪ್ರಜ್ವಲ್, ಮಣಿ, ರಾಹಿದ್, ಸಾಹಿಲ್, ಮನು ಮತ್ತಿತರು ಉಪಸ್ಥಿತರಿದ್ದರು.

Key words: MLC- H.Vishwanath-minister-position- Letter campaign -mysore