Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಸಂಪುಟ ವಿಸ್ತರಣೆ: ನಮ್ಮನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಿ- ಶಾಸಕ ಅಶೋಕ್ ಪಟ್ಟಣ್ ಒತ್ತಾಯ

ಸಂಪುಟ ವಿಸ್ತರಣೆ: ನಮ್ಮನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಿ- ಶಾಸಕ ಅಶೋಕ್ ಪಟ್ಟಣ್ ಒತ್ತಾಯ

ನವದೆಹಲಿ,ಜುಲೈ,16,2026 (www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಇದೀಗ ಮುನ್ನೆಲೆಗೆ ಬಂದಿದ್ದು ಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಂತೆ ಶಾಸಕರ ಲಾಬಿ ಜೋರಾಗಿದೆ.

ನವದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್, ನಾನು ಸಚಿವ ಸ್ಥಾನದ ಆಕಾಂಕ್ಷಿ. ಜಿಲ್ಲೆಯಲ್ಲಿ ಜಾತಿ ಲೆಕ್ಕಾಚಾರದ ಕಾರಣ ನಾನು ಮಂತ್ರಿಯಾಗಿಲ್ಲ.  ಈ ಬಾರಿ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದೇನೆ  ಎಂದರು.

ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಢಿದ್ದೇನೆ .  ಇಂದು ಕೆಸಿ ವೇಣುಗೋಪಾಲ್ ಭೇಟಿಯಾಗುತ್ತೇನೆ .  ಬೆಳಗಾವಿ ದೊಡ್ಡ ಜಿಲ್ಲೆ ಬೇರೆ ಶಾಸಕರು ಪ್ರಯತ್ನ ಮಾಡುತ್ತಿದ್ದಾರೆ.  ನಮ್ಮನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಲು ಕೇಳಿದ್ದೇನೆ ಎಂದು ಶಾಸಕ ಅಶೋಕ್ ಪಟ್ಟಣ್ ತಿಳಿಸಿದರು.ಸಂಪುಟ ವಿಸ್ತರಣೆ jk02_new jk02 new

Key words: Cabinet expansion, MLA, Ashok Pattan