Wednesday, October 14, 2026

Dasara Wishes

Happy Dasara
Home Front Page ದಸರಾ ಕ್ರೀಡಾಕೂಟ ಸಿಎಂ ಕಪ್-2026: ವಿಜೇತರಿಗೆ ಬಹುಮಾನ ವಿತರಣೆ

ದಸರಾ ಕ್ರೀಡಾಕೂಟ ಸಿಎಂ ಕಪ್-2026: ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು,ಅಕ್ಟೋಬರ್‌,14,2026 ():  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ದಸರಾ ಕ್ರೀಡಾಕೂಟ ಸಿಎಂ ಕಪ್-2026″ರ ವಿಜೇತರಿಗೆ ಬುಧವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಈ ವೇಳೆ ಶಾಸಕತನ್ವೀರ್ ಸೇಠ್ ಅವರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಎಂದು ಪ್ರೇರೆಪಿಸುತ್ತಿಲ್ಲ. ಅತೀ ಹೆಚ್ಚು ಅಂಕ ಪಡೆಯಬೇಕು ಎಂದು ನೀರಿಕ್ಷಿಸುತ್ತಿದ್ದಾರೆ. ಎಲ್ಲರೂ ವೈದ್ಯರು, ಎಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ‌ ಎಂದು ಹೇಳಿದರು.

ಈ ನಾಡನ್ನು ಕಟ್ಟಲು ಎಲ್ಲಾ ಕ್ಷೇತ್ರದವರು ಬೇಕು. ಗೆಲವು, ಸೋಲು ಎರಡನ್ನು ಸಮವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಕ್ರೀಡೆ ಕಲಿಸುತ್ತದೆ‌. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಕ್ರೀಡಾ ಜವಾಬ್ದಾರಿ ನೀಡಬೇಕು. ನಗರ ಸಭೆ, ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ವಿಧಾನ ಸಭಾ ಕ್ಷೇತ್ರವಾರು ಕ್ರೀಡಾಪಟುಗಳನ್ನು ಗುರುತಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ತಿಳಿಸಿದರು.Dasara Sports Meet dasara dasara 1

ದಸರಾದಲ್ಲಿ ಪ್ರತೀ ವರ್ಷ ಕ್ರೀಡಾಪಟುಗಳ ಏರಿಕೆಯನ್ನು ನಾವು ನೋಡುತ್ತಿದ್ದೇವೆ. ಯುವಸಮೂಹವು ಕ್ರೀಡಾ ಮಾನೋಭಾದಿಂದಲೇ ಈ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಇದೇ ಉದ್ದೇಶದಿಂದ ನಮ್ಮ ಸರ್ಕಾರವು ಭಾರತ್ ಜೋಡೊ ಯುವಕರ ಸಂಘವನ್ನು ರೂಪಿಸುತ್ತಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್ ಅವರು ಮಾತನಾಡಿ, ನಾಲ್ಕು ದಿನಗಳ ಕಾಲ ದಸರಾ ಕ್ರೀಡಾಕೂಟವನ್ನು ಉತ್ತಮವಾಗಿ ಆಯೋಜಿಸಿ ಯಶಸ್ವಿಗೊಳಿಸಿರುವ ಹೆಗ್ಗಳಿಕೆ ನಮಗಿದೆ. ಇದಕ್ಕಾಗಿ ತರಬೇತುದಾರರು ಹಾಗೂ ಇಲಾಖಾ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ ಎಂದರು.

ಸರ್ಕಾರದಿಂದ ಕ್ರೀಡಾಪಟುಗಳಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯ ಹಾಗೂ ಗೌರವವನ್ನು ಇಲಾಖೆ ಒದಗಿಸಿಕೊಡುತ್ತಿದೆ. ಅದರಂತೆ ಕ್ರೀಡಾಪಟುಗಳು ನಮ್ಮ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಮತ್ತು ಯಶಸ್ಸನ್ನು ತರಬೇಕು ಎಂದು ಆಶಿಸಿದರು.Dasara Sports Meet jk02_new jk02 new

ಇದೇ ಸಂದರ್ಭದಲ್ಲಿ ಕಬ್ಬಡ್ಡಿ ರಾಷ್ಟ್ರೀಯ ತರಬೇತುದಾರ ಬಿ‌.ಸಿ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ  ಎಂ.ಸಿ.ರಮೇಶ್ ಅವರು, ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರು, ದಸರಾ ಉಪಸಮಿತಿಯ ಅಧ್ಯಕ್ಷ ವಿಜಯ್ ಉಪಾಧ್ಯಕ್ಷ ಸಂದೇಶ್, ಜಾಕೀರ್ ಪಾಷಾ, ಪ್ರಮೋದ್ ಜಯರಾಮ್, ವಿನಯ್ ಕುಮಾರ್, ಟಿ.ರಘು, ಪರಶಿವಮೂರ್ತಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

Dasara Sports Meet, CM Cup-2026, Prize, distribution , winners

English Summary
Title

Dasara Sports Meet 2026: CM Cup Winners

Short Description
The State-Level Dasara Sports Meet – CM Cup 2026 concluded on October 14 at Chamundi Vihar Stadium, Mysuru. Highlighting the event, Sports Minister Dr. G. Parameshwara announced hiked cash prizes for Dasara winners alongside up to ₹1 crore for international medalists and a 2% government job quota. Highlighting the 26 disciplines, Bengaluru Urban's V.M. Prasanna Kumar broke the men's 100m sprint record (10.56s) and Belagavi's Shilpa Hosamane set a new women's 1500m record. Mysuru division dominated football, defeating Bengaluru Rural 8-0.
Keywords
Dasara Sports Meet, CM Cup-2026, Prize, distribution, winners