ಬೆಂಗಳೂರು,ಜುಲೈ,16,2026 (www.justkannada.in): ರಾಜ್ಯ ಸರ್ಕಾರದಿಂದ ಎನ್ ಆರ್ ಐ ಇಲಾಖೆ ಸ್ಥಾಪಿಸುವ ವಿಚಾರ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎನ್ ಆರ್ ಐ ಇಲಾಖೆ ಸ್ಥಾಪಿಸುವ ಬಗ್ಗೆ ಇಂದು ನಡೆಸುವ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಎನ್ ಆರ್ ಐ ಇಲಾಖೆ ಆಗಬೇಕೆಂದು ನಮ್ಮ ಪ್ರಣಾಳಿಕೆಯಲ್ಲಿ ಇತ್ತು ಸ್ಕಾಲರ್ ಶಿಪ್ ವಿದೇಶಿ ಅಧ್ಯಯನ ಸೇರಿ ಅನೇಕ ವಿಚಾರಗಳಿವೆ. ಹೂಡಿಕೆ ಅಂದಾಗ ಕ್ಲಾಶಸ್ ಬರುತ್ತದೆ. ಆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ಏನು ಚರ್ಚೆ ಮಾಡುತ್ತಾರೆ ನೋಡೋಣ ಎಂದರು.
Key words: discussion, NRI department, government, Minister, M.B. Patil







