Tuesday, September 22, 2026

BDA Apartments

Home Front Page ಮಂತ್ರಿಯಾಗಿ ಬೆಳೆಯುತ್ತಾನೆಂದು ಕೆಲವರಿಗೆ ಹೊಟ್ಟೆ ಕಿಚ್ಚು: ನನ್ನ ವಿರುದ್ಧ ಷಡ್ಯಂತ್ರ- ಶಾಸಕ ವಿಜಯಾನಂದ ಕಾಶಪ್ಪನವರ್ ಬೇಸರ.

ಮಂತ್ರಿಯಾಗಿ ಬೆಳೆಯುತ್ತಾನೆಂದು ಕೆಲವರಿಗೆ ಹೊಟ್ಟೆ ಕಿಚ್ಚು: ನನ್ನ ವಿರುದ್ಧ ಷಡ್ಯಂತ್ರ- ಶಾಸಕ ವಿಜಯಾನಂದ ಕಾಶಪ್ಪನವರ್ ಬೇಸರ.

ಬಾಗಲಕೋಟೆ, ಮೇ,27,2023(www.justkannada.in):  ತಮಗೆ ಸಚಿವ ಸ್ಥಾನ ಸಿಗದ ಹಿನ್ನೆಲೆ ಶಾಸಕ ವಿಜಯಾನಂದ ಕಾಶಪ್ಪನವರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಿಜಯಾನಂದ ಕಾಶಪ್ಪನವರ್,  ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಚಿವ ಸ್ಥಾನ ಕೊಡುವ ನಿರೀಕ್ಷೆ ಇತ್ತು. ಸಚಿವ ಸ್ಥಾನ ಕೊಡದಿದ್ದಕ್ಕೆ ಕ್ಷೇತ್ರದ ಜನ ಆಕ್ರೋಶ ಹೊರಹಾಕ್ತಿದ್ದಾರೆ. ಕ್ಷೇತ್ರದ ಜನರನ್ನು ಸಮಾಧಾನ ಮಾಡುತ್ತಿದ್ದೇನೆ . ಮಂತ್ರಿಯಾದ್ರೆ ಎಲ್ಲಿ ಬೆಳೆಯುತ್ತಾನೆ ಎಂದು ಕೆಲವರಿಗೆ ಹೊಟ್ಟೆ ಕಿಚ್ಚು. ನನ್ನ ವಿರುದ್ಧ ಷಡ್ಯಂತ್ರ ನಡೆದಿರಬಹುದು.​​ ನಮ್ಮ ನಾಯಕರು ಹಿತ್ತಾಳೆ ಕಿವಿ ಹಾಕಿಕೊಂಡು ಕುಳಿತಿರುತ್ತಾರೆ. ನಿಜವಾದ ಶಕ್ತಿ ಯಾರ ಬಳಿ ಎಂದು ತಿಳಿದಿರುತ್ತಾರೆ ಎಂದು ಹೇಳಿದರು.ಮಂತ್ರಿಯಾಗಿ ಬೆಳೆಯುತ್ತಾನೆಂದು ಕೆಲವರಿಗೆ ಹೊಟ್ಟೆ ಕಿಚ್ಚು vijayananda

ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೆ ತಂದಿದ್ದಾರೆ, ಅವರ ವಿಶ್ವಾಸ ಉಳಿಸಿಕೊಂಡು ಯಾವುದೇ ಸಮಸ್ಯೆಯಿಲ್ಲದೆ 5 ವರ್ಷಗಳ ಕಾಲ ಸರ್ಕಾರ ನಡೆಸಬೇಕಿದೆ, ಈಗ ಸಚಿವ ಸ್ಥಾನ ಸಿಗದಿದ್ದರೂ ಮುಂದೆ ಸಿಗಬಹುದು ಎಂದು ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

Key words: minister-post-congress- MLA -Vijayananda Kashappanavar