ಕೈ ತಪ್ಪಿದ ಸಚಿವ ಸ್ಥಾನ: ಅಸಮಾಧಾನ ಹೊರ ಹಾಕಿದ ಎಂಎಲ್ ಸಿ ಬಿ.ಕೆ ಹರಿಪ್ರಸಾದ್.

ಬೆಂಗಳೂರು,ಮೇ,27,2023(www.justkannada.in): ಇಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು 24 ಸಚಿವರು  ಸಿಎಂ ಸಿದ್ಧರಾಮಯ್ಯ ಸಂಪುಟ ಸೇರಿದ್ದಾರೆ.  ಈ ನಡುವೆ ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಮಾತನಾಡಿದ ಬಿ.ಕೆ ಹರಿಪ್ರಸಾದ್,  ಸಿಎಂ ಇಷ್ಟ ಬಂದಂತೆ ಮಾಡಿಕೊಂಡಿದ್ದಾರೆ ಸಭಾ ನಾಯಕನಿಗೆ ಸಚಿವ ಸ್ಥಾನ ನೀಡುವ ಪದ್ದತಿ ಇತ್ತು. ಆದರೆ ಸಿದ್ಧರಾಮಯ್ಯ ಈಗ ಬದಲಾಯಿಸಿದ್ದಾರೆ. ನಾನು  ಮಂತ್ರಿ ಮಾಡಿ ಅಂತಾ ಯಾರನ್ನೂ ಕೇಳಿ ಕೊಂಡಿರಲಿಲ್ಲ. ಎಲ್ಲಿವರೆಗೂ ಹೇಳುತ್ತಾರೋ ಅಲ್ಲಿವರೆಗೂ ಇರುತ್ತೇನೆ ಎಂದರು.

ನಾನು ಪಕ್ಷ ಕಟ್ಟಿದವನು. ಶ್ರಮ ವಹಿಸಿದ್ದೇನೆ. ನಾನು ಸ್ವಂತಮನೆಯಲ್ಲಿ ಇರುವವನು.  ನಾನು ಬಾಡಿಗೆ ಮನೆಯಲ್ಲಿ ಇಲ್ಲ.  ಸಾಮಾಜಿಕ ನ್ಯಾಯಕ್ಕೂ ಅಹಿಂದಕ್ಕೂ ವ್ಯತ್ಯಾಸವಿದೆ ನಾನು ಅಹಿಂದ ಅಂತಾ ಹೇಳಲ್ಲ ಎಂದು ಬಿ.ಕೆ ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.

Key words: Missed- ministerial –post-MLC-BK Hariprasad –expressed- his displeasure.