ಮೈಸೂರು,ಏಪ್ರಿಲ್,20,2026 (www.justkannada.in): ಸಾಮಾಜಿಕ ಚಳವಳಿ ಮೂಲಕ ಸಮಸಮಾಜ ನಿರ್ಮಾಣ ಮಾಡಿದವರು ಬಸವಣ್ಣ. ವರ್ಣಾಶ್ರಮದ ವಿರುದ್ದ ವಚನ ಸಾಹಿತ್ಯ ಮೂಲಕ ಸಂದೇಶ ಸಾರಿದವರು ಬಸವೇಶ್ವರರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ನುಡಿದರು.
ಇಂದು ಮೈಸೂರಿನಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಬಸವೇಶ್ವರರು ನಮಗೆ ದೊಡ್ಡ ಪ್ರೇರಣ ಶಕ್ತಿ. ಬಸವಣ್ಣ 8ನೇ ವಯಸ್ಸಿನಲ್ಲಿ ಜನಿವಾರ ಧರಿಸುವ ಸಂದರ್ಭ ಬಂದಾಗ ಧಿಕ್ಕಿರಿಸಿ ನನಗಿಂತ ದೊಡ್ಡವಳಾದ ಅಕ್ಕನಿಗೆ ಜನಿವಾರ ಹಾಕುಲು ಹೇಳಿದರು. ಆಗ ಆಕೆ ಹೆಣ್ಣೂ ಎಂದಾಗ ಲಿಂಗ ತಾರತಮ್ಯವನ್ನು ವಿರೋಧಿಸಿದರು ಸಾಮಾಜಿ ಚಳುವಳಿ ಮೂಲಕ ಸಮಸಮಾಜ ನಿರ್ಮಾಣ ಮಾಡಿದರು. ಜನರಿಗೆ ಅರ್ಥವಾಗುವ ರೀತಿ ಹೋರಾಟ ಮಾಡಿದರು ಎಂದರು.
ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಸಿಎಂ ಘೋಷಿಸಿದ್ದಾರೆ. ಬುದ್ದ, ಬಸವ ಅಂಬೇಡ್ಕರ್, ಪೆರಿಯಾರ್, ಗಾಂಧಿ, ಪುಲೆ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡು ಚರಿತ್ರೆ ನಿರ್ಮಿಸಿದರು. 800 ವರ್ಷಗಳ ಹಿಂದೆಯೇ ಅನುಭವ ಮಂಟಪ ನಿರ್ಮಿಸಿ ಅಲ್ಲಮ ಪ್ರಭು ಅವರನ್ನ ಅಧ್ಯಕ್ಷರನ್ನಾಗಿ ಮಾಡಿದರು ಈಗ ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದಾರೆ. ಆದರೆ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ತಂದು ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ನೀಡುವಂತೆ ಪ್ರತಿಪಾದಿಸಿದಾಗ ಅಂಬೇಡ್ಕರ್ ಗೆ ಸೋಲಾಗುವಂತೆ ಮಾಡಿದ್ದು ಮನುವಾದಿಗಳು. ಸಾಮಾಜಿಕ ತಳಹದಿಯ ಮೇಲೆ ಪ್ರಜಾಪ್ರಭುತ್ವ ನಿಂತಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.
Key words: Basavanna, created, equal society, Minister, H.C. Mahadevappa







