Tuesday, September 22, 2026

BDA Apartments

Home Crime ಫೈನಾನ್ಸ್ ಕಿರುಕುಳಕ್ಕೆ ಸಿಎಂ ತವರಲ್ಲಿ ಮತ್ತೊಂದು ಬಲಿ

ಫೈನಾನ್ಸ್ ಕಿರುಕುಳಕ್ಕೆ ಸಿಎಂ ತವರಲ್ಲಿ ಮತ್ತೊಂದು ಬಲಿ

ಮೈಸೂರು,ಜನವರಿ,30,2025 (www.justkannada.in): ರಾಜ್ಯದಲ್ಲಿ ಫೈನಾನ್ಸ್ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಫೈನಾನ್ಸ್ ಕಿರುಕುಳಕ್ಕೆ ಸಿಎಂ ತವರಲ್ಲಿ ಮತ್ತೊಂದು ಬಲಿ nypunya1ಲು ತೀರ್ಮಾನಿಸಿದೆ. ಈ ಮಧ್ಯೆಯೂ  ಫೈನಾನ್ಸ್ ಕಿರುಕುಳಕ್ಕೆ ಬಲಿಯಾಗುತ್ತಿರುವ ಘಟನೆ ಮುಂದುವರೆದಿದೆ.

ಇದೀಗ  ಸಿಎಂ ತವರಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಫೈನಾನ್ಸ್ ಕಿರುಕುಳದಿಂದ ಕೂಲಿ ಕಾರ್ಮಿಕ ವಿಷ ತೆಗದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬೆಟ್ಟದಪುರ ಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸುಬ್ರಹ್ಮಣ್ಯ (37) ಬಿನ್ ನಾಗರಾಜ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಸುಬ್ರಮಣ್ಯ  ಎಚ್ ಎಫ್ ಸಿ ಎಲ್ ಫೈನ್ಯಾನ್ಸ್ ನಲ್ಲಿ 6 ಲಕ್ಷ ಸಾಲ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಫೈನಾನ್ಸ್ ಕಂಪನಿ ಆಧಾರ ಕಾರ್ಡ್ ತೆಗೆದುಕೊಂಡು ಸಾಲ ನೀಡಿತ್ತು. ಈ ಮಧ್ಯೆ ಸಾಲ ತೀರಿಸಲಾಗದೆ ಸುಬ್ರಮಣ್ಯ ಸಮಸ್ಯೆಗೆ ಸಿಲುಕಿದ್ದು,  ಸುಬ್ರಮಣ್ಯ ಮನೆ ಮೇಲೆ ಸಾಲದ ಬಗ್ಗೆ ಫೈನ್ಯಾನ್ಸ್ ಕಂಪನಿ ಬರೆದಿತ್ತು.

ಇದರಿಂದ ಬೇಸತ್ತ ಸುಬ್ರಹ್ಮಣ್ಯ ವಿಷ ತೆಗದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸ್ಥಳಕ್ಕೆ ಬೆಟ್ಟದಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words: Another victim, financial harassment, death, mysore