Saturday, August 8, 2026

BDA Apartments

Home Front Page MLC ಮಂಜೇಗೌಡರ ಮೇಲೂ ದೂರು ದಾಖಲಿಸಿ: ಸ್ನೇಹಮಯಿ ಕೃಷ್ಣಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ಸವಾಲು

MLC ಮಂಜೇಗೌಡರ ಮೇಲೂ ದೂರು ದಾಖಲಿಸಿ: ಸ್ನೇಹಮಯಿ ಕೃಷ್ಣಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ಸವಾಲು

ಮೈಸೂರು,ಜನವರಿ,30,2025 (www.justkannada.in): ಎಂಎಲ್ ಸಿ ಮಂಜೇಗೌಡರೂ ಕೂಡ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಇಡಿ ತನಿಖೆಯಲ್ಲಿ ಹೇಳುತ್ತಿದೆ. ಹೀಗಾಗಿ  ಅಷ್ಟೊಂದು ಸಾಮಾಜಿಕ ಕಳಕಳಿ ಇದ್ದರೆ ಇವರ ವಿರುದ್ದವೂ ದೂರು ದಾಖಲಿಸಿ ಎಂದು ಸ್ನೇಹಮಯಿ ಕೃಷ್ಣಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಜೇಶ್ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಜೇಶ್, ಸಿಎಂ ಸಿದ್ದರಾಮಯ್ಯ ಮೇಲೆ ದೂರು ಕೊಟ್ಟು ರಾಜಕೀಯ ಷಡ್ಯಂತ್ರ ಮಾಡಿದರು. ಈಗ ಇತ್ತೀಚೆಗೆ ಜಿಟಿ ದೇವೇಗೌಡರ  ಮೇಲೂ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಅವರ ಪರ ಜಿಟಿ ದೇವೇಗೌಡರು ಮಾತನಾಡಿದರು ಅಂತ ಈಗ ಅವರ ಮೇಲೂ ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲಾ ಕುಮಾರಸ್ವಾಮಿ ಪಿತೂರಿಯಿಂದ ನಡೆಯುತ್ತಿದೆ. ಸ್ನೇಹಮಯಿ ಕೃಷ್ಣ ಮೂಲಕ ಜಿಟಿ ದೇವೇಗೌಡರ ಕಟ್ಟಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಈಗ ಎಂಎಲ್ಸಿ ಮಂಜೇಗೌಡರೂ ಕೂಡ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಇಡಿ ತನಿಖೆಯಲ್ಲಿ ಹೇಳುತ್ತಿದೆ  ಇದೆ. ಅವರ ಮೇಲೆ ಯಾಕೆ ದೂರು ದಾಖಲಿಸುತ್ತಿಲ್ಲ.? ಅವರ ಮೇಲೂ ದೂರು ಕೊಡಿ. ಅವರ ವಿರುದ್ಧವೂ ಹೋರಾಟ ಮಾಡಿ. ಸಿದ್ದರಾಮಯ್ಯ ಅವರನ್ನೇ ಯಾಕೆ ಟಾರ್ಗೆಟ್ ಮಾಡಿ ಅವರನ್ನು ಕಟ್ಟಿ ಹಾಕುವ ಷಡ್ಯಂತ್ರ ಮಾಡುತ್ತಿದ್ದೀರಿ.? ಎಂದು ಪ್ರಶ್ನಿಸಿದರು.

ಎಚ್.ಡಿ ಕುಮಾರಸ್ವಾಮಿ ಅವರು ಬಿಡದಿ ಬಳಿ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿಕೊಂಡಿರುವುದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಈ ಕೂಡಲೇ ಒತ್ತುವರಿ ತೆರವು ಮಾಡಬೇಕು ಎಂದು ಕೋರ್ಟ್ ಹೇಳಿದೆ. ನೀವೇ ಅಕ್ರಮದಲ್ಲಿ ಭಾಗಿಯಾಗಿ ಇನ್ನೊಬ್ಬರ ಮೇಲೆ ಯಾವ ನೈತಿಕತೆ ಇಟ್ಟುಕೊಂಡು ಆರೋಪ ಮಾಡುತ್ತೀರಿ.? ಈ ಹಿಂದೆ ಡಿಕೆ ಶಿವಕುಮಾರ್ ಮೇಲೂ ಇದೇ ರೀತಿ ಇಡಿ ಭೂತ ಬಿಟ್ಟು ಎದರಿಸಿದ್ದರು ಎಂದು ರಾಜೇಶ್ ಕಿಡಿಕಾರಿದರು.

Key words: File, complaint, against, MLC Manjegowda challenges, Snehamayi Krishna