Thursday, September 17, 2026

BDA Apartments

ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್: ಆನ್ ಲೈನ್ ಮೂಲಕ ವ್ಯಕ್ತಿಗೆ 5.48 ಲಕ್ಷ ರ...
Home Crime ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್: ಆನ್ ಲೈನ್ ಮೂಲಕ ವ್ಯಕ್ತಿಗೆ 5.48 ಲಕ್ಷ ರೂ. ವಂಚನೆ.

ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್: ಆನ್ ಲೈನ್ ಮೂಲಕ ವ್ಯಕ್ತಿಗೆ 5.48 ಲಕ್ಷ ರೂ. ವಂಚನೆ.

ಮೈಸೂರು,ಆಗಸ್ಟ್,10,2023(www.justkannada.in):  ಆನ್‌ಲೈನ್ ಮೂಲಕ ಮತ್ತೊಂದು ರೀತಿಯ ವಂಚನೆ ಇದೀಗ ಬೆಳಕಿಗೆ ಬಂದಿದ್ದು ವ್ಯಕ್ತಿಗೆ  ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಕಳುಹಿಸಿ 5.48 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕಣ್ಣನ್ (52)  ಹಣ ಕಳೆದುಕೊಂಡವರು. ಮೈಸೂರು ಯಾದವಗಿರಿ ಬಡಾವಣೆಯ ನಿವಾಸಿಯಾಗಿರುವ ಕಣ್ಣನ್ ಅವರಿಗೆ ವಿದ್ಯುತ್ ಬಿಲ್ ಬಾಕಿ ಇದೆ ಪಾವತಿಸುವಂತೆ ದೂರವಾಣಿ ಕರೆ ಬಂದಿದೆ. ವಂಚಕರು  ನಂತರ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಕಣ್ಣನ್ ಅವರ  ಖಾತೆಯಲ್ಲಿದ್ದ  5,48,149 ರೂಪಾಯಿಯನ್ನ ವಂಚಕರು ವರ್ಗವಣೆ ಮಾಡಿಕೊಂಡಿದ್ದಾರೆ. ಈ ಕುರಿತು ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Message – pay electricity –bill-Rs 5.48 lakh – person – online- Fraud