Wednesday, September 23, 2026

BDA Apartments

ಆರೋಗ್ಯ ಖಾತೆ ಅತ್ಯುತ್ತಮವಾಗಿ ನಿಭಾಯಿಸುವೆ-ಸಚಿವ ಸುಧಾಕರ್ ವಿಶ್ವಾಸ… BDA JK_Adv BDA...
Home Front Page ಮೈಮೂಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆ..

ಮೈಮೂಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆ..

ಮೈಸೂರು,ಆ,14,2019(www.justkannada.in):  ಮೈಮೂಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯೇ ನಡೆಯದೆ ಮಾವಿನಹಳ್ಳಿ ಸಿದ್ದೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ  ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತರಾದ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಸಿಎಂ ಬಿಎಸ್‌ ಯಡಿಯೂರಪ್ಪ ತಂಗಿ ಮಗ ಎಸ್‌.ಸಿ.ಅಶೋಕ್  ನಾಮಪತ್ರ ಸಲ್ಲಿಸಿದ್ದರು.

ಈ ನಡುವೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಸಿಎಂ ಬಿಎಸ್‌ವೈ ಜೊತೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ವೈ ತಂಗಿ ಮಗ ಎಸ್.ಸಿ.ಅಶೋಕ್‌  ನಾಮಪತ್ರ ವಾಪಸ್ ಪಡೆದರು. ನಾಮಪತ್ರ ವಾಪಸ್ ಹಿನ್ನೆಲೆ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ಸಂಘದ ನೂತನ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾದರು.

ಮೈಮುಲ್ ನಲ್ಲಿ ನಾಮನಿರ್ದೇಶಿತರು ಸೇರಿ 14 ಮಂದಿ ಸದಸ್ಯರಿದ್ದು, ಸಿಎಂ  ಬಿಎಸ್‌ವೈ-ಜಿಟಿದೇವೇಗೌಡರ ಮಾತುಕತೆ ಯಶಸ್ವಿಯಾಗಿತು.

Key words: mavinahalli Siddhegowda- unanimously – elected –mymul-President