ಫೋನ್ ಕದ್ಧಾಲಿಕೆಯಾಗಿರೋದು ಸತ್ಯ: ಈ ಬಗ್ಗೆ ತನಿಖೆಯಾಗಲಿ- ಮಾಜಿ ಡಿಸಿಎಂ ಆರ್, ಅಶೋಕ್ ಆಗ್ರಹ…

ಬೆಂಗಳೂರು,ಆ,14,2019(www.justkannada.in):  ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಫೋನ್ ಕದ್ಧಾಲಿಕೆಯಾಗಿರುವುದು ಸತ್ಯ. ಈ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆಗ್ರಹಿಸಿದರು.

ಫೋನ್ ಟ್ಯಾಪಿಂಗ್ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಫೋನ್ ಟ್ಯಾಪಿಂಗ್ ಅನ್ನೊದು ಕ್ರಿಮಿನಲ್ ಅಪರಾಧ. ಫೋನ್ ಟ್ಯಾಪಿಂಗ್ ಬಗ್ಗೆ 6 ತಿಂಗಳ ಹಿಂದೆಯೇ ಹೇಳಿದ್ದೆ. ರಾಜಕಾರಣಿಗಳ ಪತ್ರಕರ್ತರ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಆಗಿದೆ. ಈ ಬಗ್ಗೆ  ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇವೆ. ಫೋನ್ ಟ್ಯಾಪಿಂಗ್ ಗೆ ಶಿಕ್ಷೆ ನೀಡುವ ಬಗ್ಗೆ ಕಾನೂನಿನಲ್ಲಿ ಇದೆ ಎಂದರು.

ಫೋನ್ ಕದ್ಧಾಲಿಕೆ ಬಗ್ಗೆ ಸಿಎಂ ಗಮನಿಸುತ್ತಾರೆ. ಈ ಕುರಿತು ಸೂಕ್ತ ತನಿಖೆಯಾಗಲಿದೆ ಎಂದು ಆರ್. ಅಶೋಕ್ ಹೇಳಿದರು.

Key words: Phonetapping-  investigate former DCM- R, Ashok.