ಹೆಂಡತಿ ಜೊತೆ ‘ವಿಡಿಯೋ ಕಾಲ್’ ನಲ್ಲಿ ಮಾತನಾಡುವಾಗ ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು.

ಮೈಸೂರು,ಮಾರ್ಚ್,5,2024(www.justkannada.in): ರೈಲಿನಲ್ಲಿ ಸಂಚರಿಸುವಾಗ ಅಥವಾ ರೈಲ್ವೆ ಹಳಿ ಬಳಿ ನಿಂತಾದ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಈ ಮಧ್ಯೆ ಇಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ಹೆಂಡತಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಆತ ಸಾವನ್ನಪ್ಪಿರುವ ಘಟನೆ  ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಮನು ಕುಮಾರ್ (26) ಮೃತಪಟ್ಟ ವ್ಯಕ್ತಿ.  ಹೆಂಡತಿಗೆ ವಿಡಿಯೋ ಕಾಲ್ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.  ಮನುಕುಮಾರ್ ದೊಡ್ಡ ಕವಲಂದೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ.

ಬೆಳಿಗ್ಗೆ ಹೆಂಡತಿ ಜೊತೆಗೆ ಮನುಕುಮಾರ್ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.  ಈ ಕುರಿತು ನಂಜನಗೂಡು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  man -died – train- collision – talking – video call-mysore