ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಹಿನ್ನೆಡೆ:  ಈ ಹಿಂದೆ ನೀಡಿದ್ದ ಒಪ್ಪಿಗೆ ಸ್ಥಗಿತ ಮಾಡಿದ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ…

ನವದೆಹಲಿ,ಡಿ,18,2019(www.justkannada.in): ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ಒಪ್ಪಿಗೆಯನ್ನ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅಮಾನತು ಮಾಡಿದೆ.

ಕಳಸಾ ಬಂಡೂರಿ ನಾಲಾ ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸ್ಥಗಿತ ಮಾಡಿದೆ. ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಪರಿಸರ ಇಲಾಖೆ, ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣ ಕುರಿತ ವಿಚಾರಣೆಯ ತೀರ್ಪು ಹೊರ ಬೀಳುವವರೆಗೆ ಕಾಮಗಾರಿ ನಡೆಸುವಂತಿಲ್ಲ. ಸುಪ್ರೀಂಕೋರ್ಟ್ ನಲ್ಲಿರುವ ವಿವಾದ ಬಗೆಹರಿಯುವವರೆಗೆ ಒಪ್ಪಿಗೆಯನ್ನ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.

ಈ ಮೂಲಕ ಕರ್ನಾಟಕಕ್ಕೆ ಮತ್ತೆ ಮಹದಾಯಿ ನದಿ ನೀರು ವಿಚಾರದಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಕಳಸಾ-ಬಂಡೂರಿ ನಾಲಾ ಯೋಜನೆ ಉತ್ತರ ಕರ್ನಾಟಕದ ಜನರ ಕುಡಿಯುವ ನೀರು ಕಲ್ಪಿಸುವಂತೆ ಮಹತ್ವದ ಯೋಜನೆಯಾಗಿತ್ತು. ಇಂತಹ ಯೋಜನೆಯ ಅನುಷ್ಠಾನಕ್ಕೆ ನೆರೆಯ ಗೋವಾ ಚಕರಾವೆತ್ತಿ, ಆಕ್ಷೇಪ ವ್ಯಕ್ತ ಪಡಿಸಿತ್ತು. ಇದರ ಮಧ್ಯೆಯೂ ಕೇಂದ್ರ ಸರ್ಕಾರ 841 ಕೋಟಿ ವೆಚ್ಚದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು.

Key words: Mahadai River dispute- Central Forest and Environment Department -breakdown -agreed