Monday, September 21, 2026

BDA Apartments

Home Crime ಬ್ಯಾಂಕ್ ಗೆ ಕನ್ನ ಹಾಕಿ ಹಣ, ಚಿನ್ನಾಭರಣ ದೋಚಿ ಕಬ್ಬಿನ ಗದ್ಧೆಯಲ್ಲಿ ಹೂತಿಟ್ಟಿದ್ಧ ಮೂವರು ಅಂದರ್.

ಬ್ಯಾಂಕ್ ಗೆ ಕನ್ನ ಹಾಕಿ ಹಣ, ಚಿನ್ನಾಭರಣ ದೋಚಿ ಕಬ್ಬಿನ ಗದ್ಧೆಯಲ್ಲಿ ಹೂತಿಟ್ಟಿದ್ಧ ಮೂವರು ಅಂದರ್.

ಬೆಳಗಾವಿ,ಮಾರ್ಚ್,14,2022(www.justkannada.in): ಅಧ್ದೂರಿ ಮದುವೆ ಶೋಕಿ ಮತ್ತು ಬೇಗ ಶ್ರೀಮಂತನಾಗಬೇಕೆಂಬ ಆಸೆಯಿಂದ ತನ್ನ ಗೆಳೆಯರ ಜೊತೆ ಸೇರಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲೇ ಹಣ ಚಿನ್ನಾಭರಣ ದೋಚಿದ್ಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಬಂಧಿತ ಆರೋಪಿಗಳು.  ಬಂಧಿತರಿಂದ 4.37 ಕೋಟಿ ರೂ ಹಣ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.ಬ್ಯಾಂಕ್ ಗೆ ಕನ್ನ ಹಾಕಿ ಹಣ arrest

ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿದ್ದರು. ಬ್ಯಾಂಕ್ ಸಿಬ್ಬಂದಿ ಬಸವರಾಜ ಹುಣಶಿ ಕಟ್ಟಿ ಗೆಳೆಯರೊಂದಿಗೆ ಸೇರಿಕೊಂಡು ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದ. ಅದ್ಧೂರಿಯಾಗಿ ಮದುವೆ ಯಾಗಲು  ಹಣ ಚಿನ್ನಾಭರಣ ದೋಚಿ ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಸದ್ಯ ಹಣ, ಚಿನ್ನಾಭರಣವನ್ನು ಮುರಗೋಡ ಪೊಲೀಸರು ವಶಕ್ಕೆ ಪಡೆದಿದ್ದು ಮೂವರನ್ನ ಬಂಧಿಸಿದ್ದಾರೆ.

Key words: bank-arrest-thief