Tuesday, September 22, 2026

BDA Apartments

Home Crime ಮದ್ದೂರು ಎಕ್ಸ್‌ಪ್ರೆಸ್‌ ವೇ ಅಪಘಾತ:  ಕಾರು ಚಾಲಕ ಮೃತ. ಬಿಇಒಗಳು ಪ್ರಾಣಾಪಾಯದಿಂದ ಪಾರು.

ಮದ್ದೂರು ಎಕ್ಸ್‌ಪ್ರೆಸ್‌ ವೇ ಅಪಘಾತ:  ಕಾರು ಚಾಲಕ ಮೃತ. ಬಿಇಒಗಳು ಪ್ರಾಣಾಪಾಯದಿಂದ ಪಾರು.

ಮದ್ದೂರು,ಜೂನ್,22,2026 (www.justkannada.in):  ಮೈಸೂರು ಜಿಲ್ಲೆಯ ಬ್ಲಾಕ್ ಶಿಕ್ಷಣಾಧಿಕಾರಿಗಳು (BEO) ಪ್ರಯಾಣಿಸುತ್ತಿದ್ದ ವಾಹನ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ.

ಮದ್ದೂರು ಸಮೀಪದ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇನಲ್ಲಿ  ವೈಶಾಲಿ ಹೋಟೆಲ್ ಸಮೀಪ ಸಂಭವಿಸಿದ್ದ ಅಪಘಾತ ಘಟನೆಯಲ್ಲಿ ಕಾರಿನಲ್ಲಿದ್ದ  ಎಲ್ಲ ಬಿಇಒಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಒಂದಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ಗಾಯಗೊಂಡಿರುವ ಅಧಿಕಾರಿಗಳನ್ನು ಚನ್ನಪಟ್ಟಣದ ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಮೈಸೂರು ತಾಲೂಕಿನ ಬಿಇಒ ಪ್ರಕಾಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.ಮದ್ದೂರು ಎಕ್ಸ್‌ಪ್ರೆಸ್‌ ವೇ ಅಪಘಾತ BEO

ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ಜಖಂಗೊಂಡಿದ್ದು, ಸ್ಥಳೀಯ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರ ನೆರವಿನಿಂದ ವಾಹನದಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಯಿತು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.ಕಾರು ಚಾಲಕ ಮೃತ. ಬಿಇಒಗಳು ಪ್ರಾಣಾಪಾಯದಿಂದ ಪಾರು jk02_new jk02 new

ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Key words: Maddur, accident,  Car driver, dies. BEOs, escape, danger