ಇಂದು ಮತ್ತು ನಾಳೆ ಸರ್ಕಾರಿ ಬಸ್ ಗಳ ಸಂಚಾರ ವ್ಯತ್ಯಯ ಸಾಧ್ಯತೆ.

ಬೆಂಗಳೂರು, ಏಪ್ರಿಲ್​ 25,2024 (www.justkannada.in): ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು ಚುನಾವಣಾ ಕಾರ್ಯಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ ಗಳನ್ನ ಬಳಕೆ ಮಾಡಿಕೊಂಡಿದೆ.

ಚುನಾವಣಾ ಕಾರ್ಯಕ್ಕೆ ಬಸ್ ಗಳನ್ನ ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಂದು, ನಾಳೆ ಸರ್ಕಾರಿ ಸಾರಿಗೆ, ಖಾಸಗಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಚುನಾವಣೆ ಕೆಲಸಕ್ಕೆ ಕೆಎಸ್​​ಆರ್​ಟಿಸಿ ಮತ್ತು ಬಿಎಂಟಿಸಿ ಖಾಸಗಿ ಬಸ್​ಗಳ ಬಳಕೆ ಮಾಡಲಾಗುತ್ತಿದೆ. ಶಾಲೆಗಳಿಗೆ ರಜೆ ಇರುವ ಕಾರಣ ಬಹುತೇಕ ಖಾಸಗಿ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ವಾಹನಕ್ಕೂ ಪ್ರತ್ಯೇಕ ದರ ಫಿಕ್ಸ್​​ ಮಾಡಲಾಗಿದ್ದು, ಮುಂಗಡ ಹಣ ಕೂಡ ಪಾವತಿ ಮಾಡಲಾಗಿದೆ.

2,100 ಕೆಎಸ್​​ಆರ್​ಟಿಸಿ ಬಸ್ ಗಳು, 1,700 ಬಿಎಂಟಿಸಿ ಬಸ್ ​ಗಳನ್ನು ಚುನಾವಣಾ ಆಯೋಗ ಬಳಕೆ​​ ಮಾಡಿಕೊಂಡಿದ್ದು, ಸರ್ಕಾರಿ ಬಸ್​ ಗಳಿಗೆ ಕಿ.ಮೀ.ಗೆ 57 ರೂ. ದರ ನಿಗದಿ ಮಾಡಲಾಗಿದೆ. ಹೀಗಾಗಿ ಎರಡು ದಿನ ಸರ್ಕಾರಿ ಬಸ್​ ಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

Key words: Lokasabha election- use-KSRTC-bus