Saturday, August 15, 2026

BDA Apartments

Home Front Page ಈ ಒಂದು ಪ್ರಕರಣ ಇಟ್ಟುಕೊಂಡು ಒಕ್ಕಲಿಗ ನಾಯಕ ಆಗಲು ಸಾಧ್ಯವಿಲ್ಲ- ಡಿಕೆಶಿಗೆ ಹೆಚ್.ಡಿಕೆ ಟಾಂಗ್.

ಈ ಒಂದು ಪ್ರಕರಣ ಇಟ್ಟುಕೊಂಡು ಒಕ್ಕಲಿಗ ನಾಯಕ ಆಗಲು ಸಾಧ್ಯವಿಲ್ಲ- ಡಿಕೆಶಿಗೆ ಹೆಚ್.ಡಿಕೆ ಟಾಂಗ್.

ಕಲಬುರಗಿ,ಮೇ,4,2024 (www.justkannada.in):  ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ, ಈ ಒಂದು ಪ್ರಕರಣ ಇಟ್ಟುಕೊಂಡು ಒಕ್ಕಲಿಗ ನಾಯಕರು ಆಗಲು ಯತ್ನಿಸುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ  ಡಿಸಿಎಂ ಡಿಕೆ ಶಿವಕುಮಾರ್ ಗೆ  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತಂದು ಮಾತನಾಡುತ್ತಿದ್ದಾರೆ. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಈ ವಿಚಾರವನ್ನು ಇಟ್ಟುಕೊಂಡು ಒಕ್ಕಲಿಗ ನಾಯಕತ್ವ ಪಡೆಯಲು ಯತ್ನಿಸಲಾಗುತ್ತಿದೆ ಇಂತಹ ವಿಷಯ ಇಟ್ಟುಕೊಂಡು ಒಕ್ಕಲಿಗ ನಾಯಕ ಆಗುವುದಕ್ಕೆ ಸಾಧ್ಯವಿಲ್ಲ ಎಂದರು.

ನಿನ್ನೆ ಓರ್ವ  ಹೆಣ್ಣು ಮಗಳಿಂದ ಜಡ್ಜ್ ಮುಂದೆ ಹೇಳಿಕೆ ನೀಡಿಸಿದ್ದಾರೆ.  ಜಡ್ಜ್ ಮುಂದೆ ನೀಡಿದ ಹೇಳಿಕೆ ಮಾಧ್ಯಮಕ್ಕೆ ಹೇಗೆ ಸೋರಿಕೆಯಾಯಿತು.  ತನಿಖೆ ಮೂಲಕ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ಬೇಡ. ಕಾಂಗ್ರೆಸ್ ನವರಿಗೆ ಪ್ರಚಾರವೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.

Key words: prajwal-case-HD Kumaraswamy-DCM-DK Shivakumar