Sunday, August 23, 2026

BDA Apartments

Home Cinema ‘ಆದಿಪುರುಷ್’ ತಂಡಕ್ಕೆ ನ್ಯಾಯಾಲಯದಿಂದ ನೋಟಿಸ್ ಜಾರಿ

‘ಆದಿಪುರುಷ್’ ತಂಡಕ್ಕೆ ನ್ಯಾಯಾಲಯದಿಂದ ನೋಟಿಸ್ ಜಾರಿ

ಬೆಂಗಳೂರು, ಅಕ್ಟೋಬರ್ 11, 2022 (www.justkannada.in): ‘ಆದಿಪುರುಷ್‌’ ಸಿನಿಮಾ ತಂಡಕ್ಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

‘ಆದಿಪುರುಷ್‌’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಇತ್ತೀಚೆಗೆ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಚಿತ್ರ ತಂಡಕ್ಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದಾರೆ,

ಚಿತ್ರದಲ್ಲಿ ರಾಮ, ಹನುಮಂತ, ರಾವಣನ ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದು ಹಿಂದುಗಳ ಮನೋಭಾವಕ್ಕೆ ಧಕ್ಕೆ ತಂದಿದೆ ಎಂದು ವಕೀಲರಾದ ರಾಜ್ ಗೌರವ್ ತಿಳಿಸಿದ್ದರು.

ಓಂ ರಾವುತ್ ನಿರ್ದೇಶನದ ‘ಆದಿಪುರುಷ್’ ಚಿತ್ರದಲ್ಲಿ ಕೃತಿ ಸನೂನ್ ಸೀತಾದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನಾಗಿ, ಸೈಫ್ ಅಲಿಖಾನ್ ರಾವಣನಾಗಿ ಬಣ್ಣ ಹಚ್ಚಿದ್ದಾರೆ.