Wednesday, July 29, 2026

BDA Apartments

Home Front Page ಮೋದಿ, ಅಮಿತ್ ಶಾಗೆ ಕರ್ನಾಟಕಕ್ಕೆ ಕಾಲಿಡುವ ಹಕ್ಕಿಲ್ಲ- ರಣದೀಪ್ ಸಿಂಗ್ ಸುರ್ಜೇವಾಲ.

ಮೋದಿ, ಅಮಿತ್ ಶಾಗೆ ಕರ್ನಾಟಕಕ್ಕೆ ಕಾಲಿಡುವ ಹಕ್ಕಿಲ್ಲ- ರಣದೀಪ್ ಸಿಂಗ್ ಸುರ್ಜೇವಾಲ.

ಬೆಳಗಾವಿ,ಏಪ್ರಿಲ್,25,2024 (www.justkannada.in):  ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಕರ್ನಾಟಕಕ್ಕೆ ಕಾಲಿಡುವ ಹಕ್ಕಿಲ್ಲ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಮೋದಿ ಅಮಿತ್ ಶಾ ಕರ್ನಾಟಕಕ್ಕೆ ಕಾಲಿಟ್ಟರೆ ಮೋದಿ ಗೋಬ್ಯಾಕ್ ಅಮಿತ್ ಶಾ ಗೋಬ್ಯಾಕ್ ಘೋಷಣೆ ಕೇಳುತ್ತೆ ಎಚ್ಚರ. ಅನ್ಯಾಯ ಮತ್ತು ಮೋಸಕ್ಕೆ ತಕ್ಕ ಪಾಠ ಕಲಿಸಬೇಕು.  ಚುನಾವಣೆಯಲ್ಲಿ ಮೋದಿಗೆ ತಕ್ಕಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಹೊಸ ಈಸ್ಟ್ ಇಂಡಿಯಾ ಕಂಪನಿ ತೆರೆದಿದೆ. ಮೋದಿ ಒಡೆದು ಆಳುವ ನೀತಿ ಅನುಸರಿಸುತಿದ್ದಾರೆ. ಮೋದಿ ಅದೇ ಈಸ್ಟ್ ಇಂಡಿಯಾ ಕಂಪನಿ ನಡೆಸುತ್ತಿದ್ದಾರೆ. ಮೋದಿ ಕನ್ನಡಿಗರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದಾರೆ . ಬಿಜೆಪಿ ಜೆಡಿಎಸ್ ಇಬ್ಬರದ್ದು  ಕರ್ನಾಟಕ ವಿರೋಧಿ ಡಿಎನ್ ಎ ಎಂದರು.

Key words: Modi, Amit Shah, Randeep Singh Surjewala