Sunday, September 20, 2026

BDA Apartments

ಲೋಕಸಭೆ ಚುನಾವಣೆ 2ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 24.48ರಷ್ಟು ವೋಟಿಂಗ್ BDA JK_Adv BD...
Home Election 2024 ಲೋಕಸಭೆ ಚುನಾವಣೆ 2ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 24.48ರಷ್ಟು ವೋಟಿಂಗ್.

ಲೋಕಸಭೆ ಚುನಾವಣೆ 2ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 24.48ರಷ್ಟು ವೋಟಿಂಗ್.

ಶಿವಮೊಗ್ಗ,ಮೇ,7,2024 (www.justkannada.in) : 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ದೇಶಾದ್ಯಂತ 3ನೇ ಹಂತದ ಮತದಾನ, ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದ14 ಕ್ಷೇತ್ರಗಳಿಗಿಂದು  ವೋಟಿಂಗ್ ನಡೆಯುತ್ತಿದೆ.

14 ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.24.48ರಷ್ಟು ಮತದಾನವಾಗಿದೆ. ಉತ್ತರ ಕನ್ನಡ , ಶಿವಮೊಗ್ಗ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದೆ. ಉತ್ತರ ಕನ್ನಡದಲ್ಲಿ ಶೇ.27.65ರಷ್ಟು , ಶಿವಮೊಗ್ಗದಲ್ಲಿ ಶೇ27.22ರಷ್ಟು ಮತದಾನವಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.27.23ರಷ್ಟು ಮತದಾನವಾಗಿದೆ. ಬೆಳಗಾವಿಯಲ್ಲಿ ಶೇ23.91ರಷ್ಟು, ಬಳ್ಳಾರಿಯಲ್ಲಿ ಶೇ26.45ರಷ್ಟು, ದಾವಣಗೆರೆಯಲ್ಲಿ ಶೇ23.73ರಷ್ಟು, ರಾಯಚೂರಿನಲ್ಲಿ ಶೇ.22.05ರಷ್ಟು, ಬಾಗಲಕೋಟೆಯಲ್ಲಿ  ಶೇ.23.80ರಷ್ಟು, ವಿಜಯಪುರದಲ್ಲಿ ಶೇ.23.91ರಷ್ಟು, ಧಾರವಾಡದಲ್ಲಿ ಶೇ.24ರಷ್ಟು, ಕಲಬುರಗಿಯಲ್ಲಿ ಶೇ.22.64ರಷ್ಟು, ಹಾವೇರಿಯಲ್ಲಿ ಶೇ.24.24ರಷ್ಟು, ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 24.64ರಷ್ಟು ಮತದಾನವಾಗಿದೆ.ಲೋಕಸಭೆ ಚುನಾವಣೆ 2ನೇ ಹಂತದ ಮತದಾನ vote

14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ  ಒಟ್ಟು 28,269 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು ಇಂದು ರಾಜ್ಯದಲ್ಲಿ 2,59,52,958  ಮಂದಿ ಮತ ಚಲಾಯಿಸಲಿದ್ದಾರೆ. 1,29,48,978 ಮಂದಿ ಪುರುಷರು, 1,29,65,579 ಮಂದಿ ಮಹಿಳೆಯರು, ಇತರೆ-1935 ಮಂದಿ ಇದ್ದಾರೆ . 14 ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದು ಇವರ ಭವಿಷ್ಯ ನಿರ್ಧಾರವಾಗಲಿದೆ.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ,ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್ ಮಕ್ಕಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮತ್ತೊಂದು ಕಡೆ ಶಿವಮೊಗ್ಗ,ಬೆಳಗಾವಿ,ಕಲಬುರಗಿ, ಬಳ್ಳಾರಿ, ಹಾವೇರಿ ಜಿದ್ದಾಜಿದ್ದಿನ ಕಣವಾಗಿದ್ದು, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಬಿ ವೈ ರಾಘವೇಂದ್ರ, ಶ್ರೀರಾಮುಲು ಪ್ರಮುಖರು ಕಣದಲ್ಲಿದ್ದಾರೆ.

Key words: Lok Sabha- Elections -Phase 2- Voting