ಕಿಡ್ನಾಪ್‌ ಕೇಸ್‌ ಗೆ ಟ್ವಿಸ್ಟ್: ಸಂತ್ರಸ್ತ ಮಹಿಳೆ ಸಿಕ್ಕಿದ್ದು ತೋಟದ ಮನೆಯಲ್ಲಿ ಅಲ್ಲ – ಸಾ.ರಾ ಮಹೇಶ್.

ಮೈಸೂರು,ಮೇ,7,2024 (www.justkannada.in): ಶಾಸಕ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧದ ಕಿಡ್ನಾಪ್‌ ಕೇಸ್‌ ಗೆ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಮಹಿಳೆ ಸಿಕ್ಕಿದ್ದು ತೋಟದ ಮನೆಯಲ್ಲಿ ಅಲ್ಲ. ಇದನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಜೆಡಿಎಸ್ ಸದಸ್ಯತ್ವಕ್ಕೂ ರಾಜಿನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಸವಾಲು ಹಾಕಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್,  ಎಸ್ಐಟಿ ತಂಡ ಮಹಿಳೆಯನ್ನು ಎಲ್ಲಿ ರಕ್ಷಿಸಿದ್ರು ಎಂದು ವಿಡಿಯೋ ಕ್ಲಿಪ್ ಬಿಡುಗಡೆ ಮಾಡಲಿ. ಹುಣಸೂರಿನ ಸಂಬಂಧಿಕರ ಮನೆಯಲ್ಲಿ ರಕ್ಷಣೆ ಮಾಡಿದ್ದಾರೆ. ಕೇಸ್ ರಿಜಿಸ್ಟರ್ ಆಗೋದಕ್ಕೂ ಮುಂಚೆಯೇ ನ್ಯಾಷನಲ್ ಮೀಡಿಯಾದಲ್ಲಿ ಸುದ್ದಿ ಬರುತ್ತೆ. ಹಾಗಾದ್ರೆ ಇದರ ರೂವಾರಿ ಯಾರು ?

ರಾಜಗೋಪಾಲ್ ತೋಟದಲ್ಲಿ ಇದ್ದ ಬಗ್ಗೆ ವಿಡಿಯೋ ಯಾಕೆ ಆಚೆ ಬಂದಿಲ್ಲ ? ಹುಣಸೂರಿನ ಕರಿಗೌಡ ರಸ್ತೆಯಲ್ಲಿ ಪವಿತ್ರಾ ಹರೀಶ್ ಎಂಬವರ ಮನೆಯಿಂದ ಕಿಡ್ನಾಪ್ ಆಗಿದ್ದ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಹರೀಶ್ ಸಂತ್ರಸ್ತ ಮಹಿಳೆಯ ಸಂಬಂಧಿ. ಯಾರು ಕರೆದುಕೊಂಡು ಹೋದರು? ಯಾವ ಅಧಿಕಾರಿಯ ಲೊಕೇಷನ್ ಇತ್ತು ? ಎಲ್ಲದಕ್ಕೂ ದಾಖಲೆಗಳನ್ನು ತೆಗೆಯಿರಿ ಎಂದು ಸಾ.ರಾ ಮಹೇಶ್ ಆಗ್ರಹಿಸಿದರು.

ಪ್ರಕರಣ ಎಸ್‌ ಐಟಿಗೆ ಕೊಟ್ಟಿರೋದು ಸ್ವಾಗತ. ಎಸ್‌ ಐಟಿಯಲ್ಲಿರುವ ಕೆಲ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಾ.ರಾ.ಮಹೇಶ್  ವಾಗ್ದಾಳಿ ನಡೆಸಿದರು.

Key words:  HD Revanna, kidnapping, case, Sa. Ra Mahesh