“ಕೆ-ಸೆಟ್ ಪರೀಕ್ಷೆ ದಿನಾಂಕ ಫಿಕ್ಸ್”

ಮೈಸೂರು,ಫೆಬ್ರವರಿ,07,2021(www.justkannada.in) : ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು(ಕೆ-ಸೆಟ್) ಏಪ್ರಿಲ್ 11 ರಂದು ನಡೆಸಲು ತೀರ್ಮಾನಿಸಿದ್ದು, ಅರ್ಜಿ ಆಹ್ವಾನಿಸಿದೆ.jk

ಕೆಸೆಟ್ ಪರೀಕ್ಷೆಯ ಪ್ರಕಟಣೆ, ಅರ್ಹತಾ ನಿಬಂಧನೆ, ಪರೀಕ್ಷಾ ಪದ್ಧತಿ, ಪಠ್ಯಕ್ರಮ, ಮಾದರಿ ಪ್ರಶ್ನೆ ಪತ್ರಿಕೆ, ಅಭ್ಯರ್ಥಿಗಳಿಗೆ ಸೂಚನೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಮೊದಲಾದ ವಿವರವನ್ನು ಕೆಸೆಟ್ ಅಂತರ್ಜಾಲದಲ್ಲಿ http//:kset.unl-mysore.nic.in ಪ್ರಕಟಿಸಲಾಗಿದೆ.

ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನ ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಶುಲ್ಕ ಸಾಮಾನ್ಯ ವರ್ಗದವರಿಗೆ 1150 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿಯವರಿಗೆ 950 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪಿಡಬ್ಲುಡಿ (ಪರ್ಸನ್ಸ್ ವಿತ್ ಡಿಸ್‌ಎಬಿಲಿಟೀಸ್) ವರ್ಗದವರಿಗೆ 650 ರೂ. ನಿಗದಿಪಡಿಸಲಾಗಿದೆ.

ಆನ್ ಲೈನ್ ಅರ್ಜಿ ಸಲ್ಲಿಸಲು ಫೆಬ್ರವರಿ 9ರಿಂದ ಮಾರ್ಚ್ 7ರವರಗೆ ಅವಕಾಶವಿದೆ. 250 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯದಿನವಾಗಿದೆ. ನೋಂದಣಿ ನಂತರ ಬ್ಯಾಂಕ್ ಚಲನ್ ಪ್ರತಿ ತೆಗೆದುಕೊಂಡು ಪರೀಕ್ಷಾ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಯಾವುದೇ ಶಾಖೆಯಲ್ಲಿ ಪಾವತಿಸಿದ ಎರಡು ದಿನಗಳ ನಂತರ ಅಭ್ಯರ್ಥಿಗಳು ಅರ್ಜಿಯನ್ನು ಮತ್ತು ಇತರ ಪ್ರತಿಗಳಾದ ಹಾಜರಾತಿ ಪತ್ರ ಹಾಗೂ ಪ್ರವೇಶಪತ್ರವನ್ನು ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.K-Set Exam-Date-Fix

ಪ್ರವೇಶಪತ್ರ ಇಟ್ಟುಕೊಂಡು, ಅರ್ಜಿಯ ಪ್ರತಿ, ಹಾಜರಾತಿ ಪತ್ರ, ಜಾತಿ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಹಾಗೂ ಸ್ನಾತಕೋತ್ತರ ಪದವಿಯ ಅಂಕಪಟ್ಟಿ ಪ್ರತಿಯನ್ನು ಎ4 ಅಳತೆಯ ಲಕೋಟೆಯಲ್ಲಿ ‘ಕೆ-ಎಸ್‌ಇಟಿ ಉಪನ್ಯಾಸಕರ ಅರ್ಹತಾ ಪರೀಕ್ಷೆ-2021’ ಎಂದು ನಮೂದಿಸಿ, ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿಗೆ ಮಾರ್ಚ್ 15 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

key words :K-Set Exam-Date-Fix