ವಾರ್ ಮ್ಯೂಸಿಯಂ ಉದ್ಘಾಟಿಸಿ ಯುದ್ದ ಟ್ಯಾಂಕ್, ಯುದ್ಧ ವಿಮಾನ ವೀಕ್ಷಿಸಿದ ರಾಷ್ಟ್ರಪತಿ ರಮನಾಥ್ ಕೋವಿಂದ್….

ಮಡಿಕೇರಿ,ಫೆಬ್ರವರಿ,6,2021(www.justkannada.in):  ಕೊಡಗು ಜಿಲ್ಲೆ ಮಡಿಕೇರಿಯಲ್ಲಿ  ಜನರಲ್‌ ತಿಮ್ಮಯ್ಯ ನಿವಾಸ ಸನ್ನಿಸೈಡ್ ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ಮಿಸಿರುವ ವಾರ್ ಮ್ಯೂಸಿಯಂ ಅನ್ನ ರಾಷ್ಟ್ರಪತಿ ರಮನಾಥ್ ಕೋವಿಂದ್ ಉದ್ಘಾಟಿಸಿದರು.jk

ಯುದ್ಧಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಣೆ ಮಾಡಿದ ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರು ಬಳಿಕ ವಾರ್ ಮ್ಯೂಸಿಯಂ ಉದ್ಘಾಟನೆ ಮಾಡಿದರು. ಈ ವೇಳೆ ವಸ್ತುಸಂಗ್ರಹಾಲಯ ಆವರಣದಲ್ಲಿರುವ ಯುದ್ದ ಟ್ಯಾಂಕ್, ಯುದ್ಧ ವಿಮಾನವನ್ನ ರಾಷ್ಟ್ರಪತಿ ರಮನಾಥ್ ಕೋವಿಂದ್  ವೀಕ್ಷಿಸಿದರು.

ಈ ವೇಳೆ  ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಅರವಿಂದ ಲಿಂಬಾವಳಿ ಸೇರಿ ಹಲವರು ಉಪಸ್ಥಿತರಿದ್ದರು.

Key words: President -Ramanath Kovind- inaugurated – War Museum-madikeri