ಇಡೀ ಕೃಷಿ ಕಾನೂನು ರದ್ಧು ಮಾಡಲು ಸಾಧ್ಯವಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ….

ಬೆಂಗಳೂರು,ಫೆಬ್ರವರಿ,6,2021(www.justkannada.in):  ಒಂದೆಡೆ ಕೃಷಿ ತಿದ್ಧುಪಡಿ ಕಾಯ್ದೆ ಹಿಂಪಡೆಯುವಂತೆ ರೈತರ ಪ್ರತಿಭಟನೆ ಜೋರಾದರೇ ಇತ್ತ ಇಡೀ ಕೃಷಿ ಕಾನೂನು ರದ್ಧು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೃಷಿ ಕಾನೂನುಗಳಲ್ಲಿ ಯಾವುದೇ ಲೋಪವಿಲ್ಲ.  ಲೋಪವಿದ್ಧರೇ ತಿದ್ಧುಪಡಿ ಮಾಡುತ್ತೇವೆ. ಆದರೆ ಇಡೀ ಕೃಷಿ ಕಾನೂನು ರದ್ಧು ಮಾಡಲು ಸಾಧ್ಯವಿಲ್ಲ ಎಂದರು.

DK shivakumar- Siddaramaiah- COMPETITION- Union Minister-Prahlad Joshi.
ಕೃಪೆ-internet

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ,  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಯಾರೂ ಕೂಡ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದು. ಮಾಧ್ಯಮಗಳಲ್ಲಿ ಹೇಳಿಕೆ ಕೊಡಬಾರದು. ಯಾರೋ ಒಬ್ಬರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರ ಹೇಳಿಕೆಯಿಂದ ಯಾವುದೇ ಉಪಯೋಗವಿಲ್ಲ ಎಂದು ತಿಳಿಸಿದರು.

Key words: whole agricultural law -cannot – abolished-Union Minister- Prahlad Joshi.