Saturday, August 8, 2026

BDA Apartments

Home Front Page ಕುಕ್ಕರಹಳ್ಳಿ ಕೆರೆಯನ್ನ ವಾಯುವಿಹಾರಿಗಳಿಗೆ ಮುಕ್ತಗೊಳಿಸಿ -ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಗೆ ಮನವಿ…

ಕುಕ್ಕರಹಳ್ಳಿ ಕೆರೆಯನ್ನ ವಾಯುವಿಹಾರಿಗಳಿಗೆ ಮುಕ್ತಗೊಳಿಸಿ -ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಗೆ ಮನವಿ…

ಮೈಸೂರು, ಆಗಸ್ಟ್, 20, 2020(www.justkannada.in): ಕುಕ್ಕರಹಳ್ಳಿ ಕೆರೆಯನ್ನು ವಾಯುವಿಹಾರಿಗಳಿಗೆ ಮುಕ್ತಗೊಳಿಸುವಂತೆ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರಿಗೆ  ಪಾಲಿಕೆ ಸದಸ್ಯ ಲೊಕೇಶ್ ವಿ.ಪಿಯಾ ಮನವಿ ಮಾಡಿದ್ದಾರೆ.

ಈ ಸಂಬಂಧ ಮನವಿ ಪತ್ರ ಸಲ್ಲಿಸಿದ ಪಾಲಿಕೆ ಸದಸ್ಯ ಲೊಕೇಶ್ ವಿ.ಪಿಯಾ, ಕೇಂದ್ರ ಸರಕಾರ ಈಗಾಗಲೇ ಅನ್ ಲಾಕ್ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಸರಿಯಷ್ಟೆ. ಈಗಾಗಲೇ ಕಳೆದ ಹಲವಾರು ತಿಂಗಳಿಂದ ಕುಕ್ಕರಹಳ್ಳಿ ಕೆರೆ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಇದೀಗ ಸರಕಾರ ಹಂತಹಂತವಾಗಿ ಲಾಕ್ ಡೌನ್ ತೆರವುಗೊಳಿಸುತ್ತಿರುವ ಕಾರಣ, ಕುಕ್ಕರಹಳ್ಳಿ ಕೆರೆಯನ್ನು ಸಹ ತೆರೆದು ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.kukkarahalli-lake-open-lokesh-v-pia-mysore-university-vc-pro-hemanth-kumar

ವಾಯು ವಿಹಾರಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಈ ಸಂಬಂಧ ಅಗತ್ಯವಿರುವ ನೀತಿ ನಿಯಮ ಪಾಲಿಸಿಕೊಂಡೆ ವಾಯುವಿಹಾರಕ್ಕೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ಮುಕ್ತಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
Key words : Kukkarahalli Lake-open-Lokesh v.Pia-mysore university- VC-pro. Hemanth kumar