ಬೆಂಗಳೂರು,ಸೆಪ್ಟಂಬರ್,24,2026 (www.justkannada.in): ಕೇಂದ್ರ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯ, ಆಕ್ಷೇಪ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಎಸ್ ಐಆರ್ ಪ್ರಕ್ರಿಯೆ ಮರುಪರಿಶೀಲನೆ ಮಾಡಬೇಕು. ಹೊಸದಾಗಿ ಎಸ್ ಐಆರ್ ಪ್ರಕ್ರಿಯೆ ಆಗಬೇಕು . ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ಒಂಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಆದರೆ ಜ್ನಾನೇಶ್ ಕುಮಾರ್ ಬಿಜೆಪಿ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಫೇಲ್ ಆಗಿದೆ. ಚುನಾವಣಾ ಆಯೋಗ ಮಿಸ್ ಯೂಸ್ ಆಗುತ್ತಿದೆ ಎಂದು ಆರೋಪಿಸಿದರು.







