Monday, November 9, 2026

Dasara Wishes

Home Minister Araga Jnanendra to visit Mysuru today: Meeting with Police officials Tomorrow DasraWishes_JK DasraWishes JK
Happy Dasara
Home Front Page ನ.13 ರಂದು ತಾರಾಯಣ ಉದ್ಘಾಟನೆಗೆ ಮೈಸೂರಿಗೆ ಪ್ರಧಾನಿ ಮೋದಿ- ಸಂಸದ ಯದುವೀರ್

ನ.13 ರಂದು ತಾರಾಯಣ ಉದ್ಘಾಟನೆಗೆ ಮೈಸೂರಿಗೆ ಪ್ರಧಾನಿ ಮೋದಿ- ಸಂಸದ ಯದುವೀರ್

ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಮೈಸೂರು,ನವೆಂಬರ್,9,2026 (www.justkannada.in): ನವೆಂಬರ್ 13 ರಂದು ಮೈಸೂರಿನ ತಾರಾಯಣ ಉದ್ಘಾಟನೆಗೆ ಮೋದಿ‌ ಆಗಮಿಸಲಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಧಾನಿ ಮೋದಿ ಕಾರ್ಯಕ್ರಮ‌ ಕುರಿತು ವಿವರಣೆ ನೀಡಿದ ಸಂಸದ ಯದುವೀರ್, ಮೈಸೂರಿನ ತಾರಾಯಣ ಉದ್ಘಾಟನೆಗೆ ಮೋದಿ‌ ಆಗಮಿಸಲಿದ್ದಾರೆ. ನ. 13 ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಾರಾಲಯ ಉದ್ಘಾಟನೆಯಾಗಲಿದೆ. ಶಿಬಿರ, ತರಬೇತಿ ನೀಡಲು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.PM Modi

ಮೈಸೂರು ಅರಮನೆ ನಮ್ಮ ಆಸ್ತಿಯೇ?  ಅಲ್ಲವೇ ಎಂಬ ಚರ್ಚೆ ಸದ್ಯಕ್ಕೆ ಅಪ್ರಸ್ತುತ

ಮೈಸೂರು ಅರಮನೆ ವಿವಾದ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಸಮಾಜ ರಾಜಕೀಯಲ್ಲಿ ರಾಜಕಾರಣದಲ್ಲಿ ಸುಧಾರಣೆ ಬಯಸುತ್ತದೆ. ಆಸ್ತಿ, ಹಣದ ಬಗ್ಗೆ ಚರ್ಚಿಸುವುದು ಅಪ್ರಸ್ತುತ. ಇಂತಹ ವಿಚಾರದಲ್ಲಿ ರಾಜಕಾರಣ ಮಾಡುವುದು ದುರ್ದೈವ. ಆಸ್ತಿ ಯಾರದು ಎಂದು ತೀರ್ಮಾನ ನಡೆಯುವುದು ನ್ಯಾಯಾಲಯದಲ್ಲಿ. ನಮ್ಮ ಆಸ್ತಿಯೇ?  ಅಲ್ಲವೇ ಎಂಬ ಚರ್ಚೆ ಸದ್ಯಕ್ಕೆ ಅಪ್ರಸ್ತುತ. ಯಾರದು ಆಸ್ತಿ ಎಂಬುದನ್ನ ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಲಯವೇ ಅಂತಿಮ. ಆಸ್ತಿ ನಮ್ಮದೋ, ಅಲ್ಲವೋ ಎಂಬುದನ್ನ ಚರ್ಚೆ ಮಾಡುವ ಅಗತ್ಯವಿಲ್ಲ. ನಮಗೆ ದಸರಾ ನಡೆಯುವುದು ಮುಖ್ಯ. ಉತ್ತಮವಾಗಿ ದಸರಾ ನಡೆದರೆ ನಮಗೂ ಅನುಕೂಲ , ಸರ್ಕಾರಕ್ಕೂ ಅನುಕೂಲ. ದಸರಾದಲ್ಲಿ ಸುಧಾರಣೆ ಆಗದಿದ್ದರೆ ಹೋರಾಟ ಅನಿವಾರ್ಯ. ದಸರಾದಲ್ಲಿ ರಾಜಕಾರಣ ಮಾಡದೆ ಉತ್ತಮ ರೀತಿ ನಡೆಸಿಕೊಳ್ಳಲಿ ಎಂದರು.ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಅರಮನೆ ವಿಚಾರ ಕೋರ್ಟ್ ನಲ್ಲಿ ಇದೆ. ಅದನ್ನ ನ್ಯಾಯಲಯವೇ ತೀರ್ಮಾನ ಮಾಡಲಿದೆ. ರಾಜಕಾರಣಿಯಾಗಿ ಕಾರ್ಯಾಂಗ, ಶಾಸಕಾಂಗ ದುರ್ಬಳಕೆ ಆಗಿದೆ. ನಮ್ಮ ಆಸ್ತಿ ತೆಗೆದುಕೊಳ್ಳಲು ನಾವು ಹೋರಾಟ ಮಾಡಬೇಕಾಗಿದೆ. ಅರಮನೆ ವಿವಾದ, ಅಂಬಾರಿ, ಸಿಂಹಾಸನ ದಸರಾ ವಿಚಾರದಲ್ಲಿ ತಾಯಿ ಅವರು ತೀರ್ಮಾನ ಮಾಡ್ತಾರೆ. ಅವರ ನಿರ್ಧಾರದಂತೆ ಕ್ರಮಕೈಗೊಳ್ತಾರೆ. ಈ‌ ಕುರಿತು ಅವರಿಗೆ ಹೆಚ್ಚಿನ ಮಾಹಿತಿ ಇದೆ. ಅವರು ಈಗಾಗಲೇ‌ ಕೂಲಂಕುಷ ಉತ್ತರ ನೀಡಿದ್ದಾರೆ. ಅಗತ್ಯ ಎನಿಸಿದರೆ ಪ್ರಮೋದಾದೇವಿ ಒಡೆಯರ್ ಅವರೇ ಉತ್ತರ ಕೊಡುತ್ತಾರೆ ಎಂದರು.

ಹಿಂದಿನ ದಸರಾದಲ್ಲೂ‌ ಕೂಡ ಲೋಪಗಳಿದ್ದವು. ಆಹಾರಮೇಳ,‌ ದೀಪಾಲಂಕಾರ ಸೇರಿ ಹಲವೆಡೆ ಲೋಪವಿದ್ದವು. ಇದನ್ನ ಕುರಿತು ಸರಿಪಡಿಸಿಕೊಂಡು‌ ಹೋಗಬೇಕಿದೆ. ಮುಂದಿನ ವರ್ಷಕ್ಕೆ ಇದನ್ನ ಸರಿಪಡಿಸಿಕೊಂಡು‌ ಹೋಗಬೇಕಿದೆ. ಕಳೆದ ವರ್ಷ ನಮ್ಮನ್ನೇ ಒಳಗೆ ಬಿಟ್ಟಿರಲಿಲ್ಲ. ಸಣ್ಣ‌ಪುಟ್ಟ ಲೋಪಗಳು ಆಗಿರುವುದನ್ನ ಸರಿಪಡಿಸಿಕೊಳ್ಳಬೇಕು. ಮುಂದಿನ ವರ್ಷ ಸಭೆಯಲ್ಲಿ ತೀರ್ಮಾನಿಸಿ‌ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟವರ ಜೊತೆ ಚರ್ಚಿಸಿ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.visit jk02_new jk02 new

ಬೆಲೆ ಏರಿಕೆ ವಿಚಾರ ಮುಚ್ಚುವ ಕಾರಣಕ್ಕೆ ಎಥನಾಲ್ ವಿಚಾರ ಪ್ರಸ್ತಾಪ

ಬೆಲೆ ಏರಿಕೆ ರಾಜ್ಯಾದ್ಯಂತ ಹೆಚ್ಚಿದೆ. ಅದನ್ನ ಮುಚ್ಚುವ ಕಾರಣಕ್ಕೆ ಎಥನಾಲ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಸುಳ್ಳು ಆರೋಪಗಳನ್ನ ತಂದು ಇದನ್ನ ಮುಚ್ತಾರೆ. ಬಿಜೆಪಿ,‌ ಕೇಂದ್ರದ ಮೇಲೆ ಇಂತಹ ಆರೋಪ‌ ಸಹಜ. ಲ್ಯಾಬ್ ರಿಪೋರ್ಟ್ ನೀಡಿ ಆರೋಪ ಮಾಡಲಿ. ನಾವು ಆರೋಪ ಎದುರಿಸಲು  ಸಿದ್ಧ. ಅವರ ಯಾವ ಆರೋಪಗಳು ಸಾಭೀತಾಗಿಲ್ಲ ಎಂದು ಸಂಸದ ಯದುವೀರ್ ತಿಳಿಸಿದರು.

PM Modi, visit, Mysuru, Nov 13, inauguration, Tarayana, MP Yaduveer

English Summary
Title

PM Narendra Modi to Inaugurate India's First Tilted Dome Planetarium in Mysuru

Short Description
Prime Minister Narendra Modi will visit Mysuru on November 13 to inaugurate COSMOS-Mysuru, the world’s first tilted LED dome planetarium. Located at the University of Mysore’s higher learning centre, this ₹116-crore astronomy landmark features a 15-metre-wide dome with 8K LED panels. Mysuru-Kodagu MP Yaduveer Wadiyar confirmed the PM’s schedule, which includes inspecting the state-of-the-art facility and launching a Swachh Bharat-themed Miyawaki mini-forest at K.C. Nagar. The PM will arrive via helicopter from Bengaluru for the evening event.
Keywords
PM Modi, visit, Mysuru, Nov 13, inauguration, Tarayana, MP Yaduveer