Monday, November 9, 2026

Dasara Wishes

Home Minister Araga Jnanendra to visit Mysuru today: Meeting with Police officials Tomorrow DasraWishes_JK DasraWishes JK
Happy Dasara
Home Front Page ಪೆಟ್ರೋಲ್ ಗೆ ಎಥೆನಾಲ್ ಮಿಕ್ಸ್ ಆರೋಪ: ಕೇಂದ್ರ ನೇರ ಉತ್ತರ ಕೊಟ್ಟಿಲ್ಲ-ಸಚಿವ ರಿಜ್ವಾನ್ ಅರ್ಷಾದ್

ಪೆಟ್ರೋಲ್ ಗೆ ಎಥೆನಾಲ್ ಮಿಕ್ಸ್ ಆರೋಪ: ಕೇಂದ್ರ ನೇರ ಉತ್ತರ ಕೊಟ್ಟಿಲ್ಲ-ಸಚಿವ ರಿಜ್ವಾನ್ ಅರ್ಷಾದ್

ಪೆಟ್ರೋಲ್ ಗೆ ಎಥೆನಾಲ್ ಮಿಕ್ಸ್ ಆರೋಪ: ಕೇಂದ್ರ ನೇರ ಉತ್ತರ ಕೊಟ್ಟಿಲ್ಲ-ಸಚಿವ ರಿಜ್ವಾನ್ ಅರ್ಷಾದ್

ಬೆಂಗಳೂರು,ನವೆಂಬರ್,9,2026 (www.justkannada.in): ಪೆಟ್ರೋಲ್ ಗೆ ಶೇ 30 ರಷ್ಟು ಎಥೆನಾಲ್ ಮಿಕ್ಸ್ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ರಿಪೋರ್ಟ್ ಸರಿಯಿದೆ. ಎಥೆನಾಲ್ ಬಗ್ಗೆ ಕೇಂದ್ರ ಸರ್ಕಾರ ನೇರ ಉತ್ತರ ಕೊಟ್ಟಿಲ್ಲ ಎಂದು ಆಹಾರ ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷಾದ್,  ತೈಲಕಂಪನಿಗಳ ಮೂಲಕ ಮಾತ್ರ ಉತ್ತರ ಕೊಡಸಿದ್ದಾರೆ. ಎಥನಾಲ್ ಬಗ್ಗೆ ಕೇಂದ್ರ ಸರ್ಕಾರ ನೇರ ಉತ್ತರ ಕೊಟ್ಟಿಲ್ಲ. ನಮ್ಮ ರಿಪೋರ್ಟ್ ಸರಿ. ನಾವು ಜನರ ಪರವಾಗಿ ಧ್ವನಿ ಎತ್ತಿದ್ದೇವೆ. ಚುನಾಯಿತ ಸರ್ಕಾರ ಕೇಳಿದ ಪ್ರಶ್ನೆಗೆ ಕೇಂದ್ರವೇ ನೇರ ಉತ್ತರ ಕೊಡಬೇಕಿತ್ತು. ಶೇ.30ರಷ್ಟು ಎಥೆನಾಲ್ ಮಿಕ್ಸ್ ಮಾಡಿದ್ರೆ ಸಮಸ್ಯೆ ಆಗುತ್ತದೆ.  ಎಥೆನಾಲ್ ಮಿಕ್ಸ್ ನಿಂದ ಸಮಸ್ಯೆ ಎಂದು ಬಿಎಂಡಬ್ಲ್ಯು ಹೇಳಿದೆ ಎಂದರು.ಪೆಟ್ರೋಲ್ ಗೆ ಎಥೆನಾಲ್ ಮಿಕ್ಸ್ ಆರೋಪ: ಕೇಂದ್ರ ನೇರ ಉತ್ತರ ಕೊಟ್ಟಿಲ್ಲ-ಸಚಿವ ರಿಜ್ವಾನ್ ಅರ್ಷಾದ್

ನಿಮ್ಮ ಸ್ಯಾಂಪಲ್ಸ್ ಸರಿಯಿಲ್ಲ ಎಂದು ತೈಲ ಮಾರಾಟ ಕಂಪನಿ ಹೇಳಿದೆ. ನಮ್ಮ ಸ್ಯಾಂಪಲ್ ಸರಿ ಇದೆ. ಎಥೆನಾಲ್ ಮಿಶ್ರಣ ಆಟೋ ಮ್ಯಾಟಿಕ್ ಎಂದು ಹೇಳುತ್ತಾರೆ. ನಾವು ನಮ್ಮ ವರದಿ ಬಗ್ಗೆ ಗಟ್ಟಿಯಾಗಿ ನಿಂತಿದ್ದೇವೆ. ವರದಿ ಸರಿ ಇದೆ. ತೈಲ ಕಂಪನಿಗಳು ತಾಂತ್ರಿಕ ಉತ್ತರಿಸಿದ್ದಾರೆ. ನೇರ ಉತ್ತರ ಕೊಟ್ಟಿಲ್ಲ. 6 ಕಡೆ ಕಂಪನಿಗಳೇ ಹೆಚ್ಚುವರಿ ಎಥೆನಾಲ್ ಮಿಶ್ರಣ ಮಾಡುತ್ತಿವೆ ಎಂದು ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.

 

English Summary
Title

Karnataka Minister Rizwan Arshad Exposes Illegal Petrol Ethanol Over-Blending

Short Description
Karnataka Minister Rizwan Arshad has demanded that the Central Government address the illegal over-blending of ethanol in petrol. State laboratory tests revealed that public sector Oil Marketing Companies (OMCs) are dispensing fuel with up to 31.2% ethanol, far exceeding the official E20 (20%) limit. Arshad warned that this over-blending damages standard vehicle engines and reduces fuel efficiency, placing a heavy financial burden on consumers. While OMCs strongly deny these allegations and defend their BIS compliance, the state government is pushing the Union Ministers for strict penalties and consumer compensation.
Keywords
Ethanol, blending, petrol, Central government, direct answer, Minister, Rizwan Arshad