ಕೆಎಸ್ ಆರ್ ಟಿಸಿ ಬಸ್ ಚಾಲಕರಿಗೆ ಗುಡ್ ನ್ಯೂಸ್: ಡಬಲ್ ಡ್ಯೂಟಿಗೆ ಬ್ರೇಕ್ .

ಬೆಂಗಳೂರು, ಮಾರ್ಚ್,28,2024 (www.justkannada.in): ಕೆಎಸ್ ಆರ್ ಟಿಸಿ ಬಸ್​ ಚಾಲಕರು ಸಿಹಿಸುದ್ದಿ ಸಿಕ್ಕಿದ್ದು, ಚಾಲಕರ ಡಬಲ್ ಡ್ಯೂಟಿಗೆ ಕೆಎಸ್ ಆರ್ ಟಿಸಿ ಬ್ರೇಕ್ ಹಾಕಿದೆ.

ಹೌದು,  ಹೆಚ್ಚುವರಿ ಡ್ಯೂಟಿ ಮತ್ತು ವಿಶ್ರಾಂತಿ ಇಲ್ಲದೇ ಇರುವುದರಿಂದ ಅಪಘಾತ ಪ್ರಕರಣಗಳು ನಡೆಯುತ್ತಿದ್ದವು.   ಹೀಗಾಗಿ ಕೆಎಸ್​ಆರ್​ಟಿಸಿ, ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ.  ಅಲ್ಲದೆ ರಾತ್ರಿ ವೇಳೆ ದೂರದ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

ರಾತ್ರಿ ಮತ್ತು ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. 8 ಗಂಟೆಗಳಿಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದಲ್ಲಿ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು  ಸೂಚನೆ ನೀಡಲಾಗಿದೆ.

Key words: KSRTC, bus, drivers, duty