Sunday, September 20, 2026

BDA Apartments

ಇಂದು ಸಂಜೆಯೊಳಗೆ ಕೋಲಾರ ಟಿಕೆಟ್ ಫೈನಲ್: ಯಾರು ರಾಜೀನಾಮೆ ಕೊಡಲ್ಲ- ಡಿಸಿಎಂ ಡಿ....
Home Front Page ಇಂದು ಸಂಜೆಯೊಳಗೆ ಕೋಲಾರ ಟಿಕೆಟ್ ಫೈನಲ್: ಯಾರು ರಾಜೀನಾಮೆ ಕೊಡಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್.

ಇಂದು ಸಂಜೆಯೊಳಗೆ ಕೋಲಾರ ಟಿಕೆಟ್ ಫೈನಲ್: ಯಾರು ರಾಜೀನಾಮೆ ಕೊಡಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಮಾರ್ಚ್,28,2024 (www.justkannada.in): ಇಂದು ಸಂಜೆಯೊಳಗೆ ಕೋಲಾರ ಲೋಕಸಭಾ ಕ್ಷೇತ್ರದ  ಟಿಕೆಟ್ ಫೈನಲ್ ಆಗಲಿದೆ.  ಯಾರು ಸಹ  ರಾಜೀನಾಮೆ ಕೊಡಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಕೋಲಾರ ಕ್ಷೇತ್ರದ ಟಿಕೆಟ್ ಕಗ್ಗಂಟು ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕೋಲಾರ ನಾಯಕರಿಂದ ಒತ್ತಡ ಇದೆ ಅಷ್ಟೆ . ಯಾವ ಶಾಸಕರೂ ಕೂಡ  ರಾಜೀನಾಮೆ ನೀಡಲ್ಲ. ಇನ್ನೂ ಕೋಲಾರ ಅಭ್ಯರ್ಥಿ ಘೋಷಣೆಯಾಗಿಲ್ಲ.ಈ ಬಗ್ಗೆ ಸಂಜೆಯೊಳಗೆ ತೀರ್ಮಾನ ಮಾಡುತ್ತೇವೆ.  ಎಲ್ಲ ಸರಿಹೋಗುತ್ತೆ ಎಂದು ಸ್ಪಷ್ಟನೆ ನೀಡಿದರು.ಇಂದು ಸಂಜೆಯೊಳಗೆ ಕೋಲಾರ ಟಿಕೆಟ್ ಫೈನಲ್ dks-dk-shivakumar dks dk shivakumar

ಸಚಿವ ಕೆ.ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದನ್ನ ವಿರೋಧಿಸಿ ನಿನ್ನೆ ಕಾಂಗ್ರೆಸ್ ಐವರು ಶಾಸಕರು ರಾಜೀನಾಮಗೆ ಮುಂದಾಗಿದ್ದರು.

Key words: Kolar, ticket, DK Shivakumar.