“ಸಿಡಿ ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ!”: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಜನವರಿ,17,2021(www.justkananda.in) : ಯಡಿಯೂರಪ್ಪ ಈ ವಯಸ್ಸಲ್ಲಿ ಏನೇನ್ ಮಾಡಿದ್ದಾನೋ ಯಾರಿಗೆ ಗೊತ್ತು? ಅದು ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ! ಅದು ಗೊತ್ತಾಗಬೇಕು ಅಲ್ಲವೇ?,  ಈ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.jk-logo-justkannada-mysore

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಸಿಎಂ ವಿರುದ್ಧ ಸಿಡಿ ಬ್ಲಾಮೇಲ್ ವಿಚಾರವಾಗಿ ಮಾತನಾಡಿದ ಅವರು, ಸಿಡಿಲಿ ಏನೇನ್ ಮಾಡಿದಾರೋ ಅನ್ನೊದು ಬಹಿರಂಗವಾಗಲಿ. ಎಲ್ಲವೂ ಗೊತ್ತಾಗಬೇಕು ಅಂದರೆ, ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಶರತ್ ಬಚ್ಚೆ ಗೌಡ ಕಾಂಗ್ರೆಸ್ ನಾಯಕರ ಭೇಟಿ ವಿಚಾರವಾಗಿ ಮಾತನಾಡಿ, ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಶರತ್ ಸೇರಿ ಚುನಾವಣೆ ನಡೆಸಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಶೇ.70 ರಷ್ಟು ಬೆಂಬಲಿತರು ಗೆದ್ದಿದ್ದಾರೆ. ಈ ಹಿನ್ನಲೆ ನನಗೆ ಧನ್ಯವಾದ ಹೇಳುವುದಕ್ಕೆ ಬಂದಿದ್ದರು ಎಂದರು.CD-Disgustingly-Former CM-Siddaramaiah 

ಶರತ್ ಬಚ್ಚೆಗೌಡ ಪಕ್ಷಕ್ಕೆ  ಬರುವ ಬಗ್ಗೆ ಮಾತುಕತೆ ನಡಯುತ್ತಿದೆ. ಇನ್ನೊಂದು 15 ದಿನದಲ್ಲಿ ಈ ಈ ಬಗ್ಗೆ ತೀರ್ಮಾನವಾಗುತ್ತೆ ಎಂದು ತಿಳಿಸಿದ್ದಾರೆ.

key words : CD-Disgustingly-Former CM-Siddaramaiah