ಕೆ.ಜಿ.ಎಫ್ -2 ಬಿಡುಗಡೆ ದಿನಾಂಕದ ಪೋಸ್ಟರ್ ಕೂಡ ವೈರಲ್ ಆಯ್ತು !

ಬೆಂಗಳೂರು, ಮಾರ್ಚ್ 14, 2020 (www.justkannada.in): ಈಗ ಕೆ.ಜಿ.ಎಫ್ -2 ಬಿಡುಗಡೆ ದಿನಾಂಕ ನಿಗದಿಯಾಗಿದೆ.

ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರ್ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಅದ್ದೂರಿ ಚಿತ್ರವನ್ನು ಅಷ್ಟೇ ಮೈ ರೋಮಾಂಚನ ರೀತಿಯಲ್ಲಿ ಸೆರೆಹಿಡಿದಿರುವ ಪ್ರಶಾಂತ್ ನೀಲ್ ಸಾರಥ್ಯಕ್ಕೆ ದೊಡ್ಡ ತಾಂತ್ರಿಕ ಬಳಗವೇ ಕೈಜೋಡಿಸಿದೆ.

ಭುವನ್ ಗೌಡ ಛಾಯಾಗ್ರಹಣದಲ್ಲಿ ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಈ ಚಿತ್ರದ ಕೇಂದ್ರ ಬಿಂದು ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ , ರವೀನಾ ಟಂಡನ್ , ಸಂಜಯ್ ದತ್ ಸೇರಿದಂತೆ ಅದ್ದೂರಿ ತಾರಾಬಳಗವೇ ತುಂಬಿಕೊಂಡಿದೆ.