ಪವನ್ ಕುಮಾರ್ ನಿರ್ದೇಶನದ ‘ಯೂ-ಟರ್ನ್’ ಫಿಲಿಫೀನ್ಸ್‌’ಗೆ!

ಬೆಂಗಳೂರು, ಮಾರ್ಚ್ 14, 2020 (www.justkannada.in): ಪವನ್ ಕುಮಾರ್ ನಿರ್ದೇಶನದ ‘ಯೂ-ಟರ್ನ್’ ಸಿನಿಮಾ ಫಿಲಿಫೀನ್ಸ್‌ ಗೆ ತೆರಳಲು ಸಜ್ಜಾಗಿದೆ.

ಫಿಲಿಫೀನ್‌ ನ ಎಬಿಎಸ್-ಸಿಬಿಎನ್ ನಿರ್ಮಾಣ ಸಂಸ್ಥೆಯು ಯೂ-ಟರ್ನ್ ಸಿನಿಮಾವನ್ನು ರಿಮೇಕ್ ಮಾಡಲು ಸಿದ್ಧವಾಗಿದ್ದು, ನಟರನ್ನೂ ಘೋಷಿಸಿದೆ.

ಫಿಲಿಫೀನ್‌ನ ಖ್ಯಾತ ನಿರ್ದೇಶಕ ಡೆರಿಕ್ ಕ್ಯಾಬ್ರಿಡೊ ಎಂಬುವರು ಯೂ-ಟರ್ನ್ ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ. ಕಿಂ ಚ್ಯು, ಡಿ ಗುಜ್‌ಮನ್, ಟೋನಿ ಲ್ಯಾಬ್ರುಸ್ಕಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.