Monday, October 12, 2026

Dasara Wishes

Happy Dasara
Home Front Page ಅನುಶ್ರೀಯನ್ನ ಮಾಜಿ ಮುಖ್ಯಮಂತ್ರಿಯೊಬ್ಬರು ರಕ್ಷಣೆ ಮಾಡುತ್ತಿದ್ದಾರೆ- ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಗಂಭೀರ ಆರೋಪ.

ಅನುಶ್ರೀಯನ್ನ ಮಾಜಿ ಮುಖ್ಯಮಂತ್ರಿಯೊಬ್ಬರು ರಕ್ಷಣೆ ಮಾಡುತ್ತಿದ್ದಾರೆ- ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಗಂಭೀರ ಆರೋಪ.

ಬೆಂಗಳೂರು,ಸೆಪ್ಟಂಬರ್ ,8,2021(www.justkannada.in): ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ, ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದಿದ್ದು ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಆರೋಪಿ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ನಲ್ಲಿ  ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀಯನ್ನ ಮಾಜಿ ಸಿಎಂವೊಬ್ಬರು  ಬಚಾವ್ ಮಾಡುತ್ತಿದ್ದಾರೆ. ಮಂಗಳೂರು ಡ್ರಗ್ಸ್ ಕೇಸ್  ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ.  ಮಾಜಿ ಸಿಎಂ ರಿಂದ ಅನುಶ್ರೀ ರಕ್ಷಣೆಯಾಗುತ್ತಿದೆ.   ಅನುಶ್ರಿ ಸೇಫ್ ಮಾಡಲು ಪೊಲೀಸರನ್ನ ವರ್ಗಾವಣೆ ಮಾಡಿದ್ರು. ನನಗೆ ಪ್ರಭಾವಿಯಿಂದ ಕರೆ ಬಂದಿತ್ತು. ಮಂಗಳೂರು ಡ್ರಗ್ಸ್ ಬಗ್ಗೆ ಮಾತನಾಡಬೇಡಿ. ಮಂಗಳೂರಿನ ಡ್ರಗ್ಸ್ ಸುದ್ಧಿ ಕೈಬಿಡಿ ಎಂದು ಹೇಳಿದ್ದರು. ಈ ಬಗ್ಗೆ 28 ಸೆಕೆಂಡುಗಳ ಆಡಿಯೋ ಶೀಘ್ರವೇ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಚಿತ್ರರಂಗದ ನಟರೂ ಖಂಡಿತವಾಗಿ ಡ್ರಗ್ಸ್ ತೆಗೆದುಕೊಂಡಿದ್ದಾರೆ. ಶನಿವಾರ, ಭಾನುವಾರ ಪಾರ್ಟಿ ವೇಳೆ ಡ್ರಗ್ಸ್ ಸೇವಿಸಿದ್ದಾರೆ.  ಹಣಕ್ಕಾಗಿ ಕೆಲ ನಟಿಯರು ಡ್ರಗ್ಸ್ ಮಾರಾಟ ಮಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ.

ಅನುಶ್ರೀ ಅವರ ನಾಟಕ ಈಗ ಬಯಲಾಗಿದೆ.  ಈ ಡ್ರಗ್ಸ್ ಪ್ರಕರಣವನ್ನ ರೀ ಓಪನ್ ಮಾಡಬೇಕು.  ಸಿಎಂ ಭೇಟಿಯಾಗಿ ನಾನು ಮನವಿ ಮಾಡುತ್ತೇನೆ ಎಂದು ಪ್ರಶಾಂತ್ ಸಂಬರಗಿ ತಿಳಿಸಿದ್ದಾರೆ.

Key words: anchor- Anushree- former CM –protect- Social worker- Prashanth sambaragi