Monday, October 12, 2026

Dasara Wishes

Happy Dasara
Home Front Page ಮೀಸಲಾತಿ ಪ್ರಮಾಣ ಶೇ 56ಕ್ಕೆ ಹೆಚ್ಚಳ ಮಾಡಿದ್ದ ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಮೀಸಲಾತಿ ಪ್ರಮಾಣ ಶೇ 56ಕ್ಕೆ ಹೆಚ್ಚಳ ಮಾಡಿದ್ದ ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು,ಅಕ್ಟೋಬರ್,12,2026 (www.justkannada.in):  ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನ ಹೈಕೋರ್ಟ್ ರದ್ದುಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.High Court quashes government order jk02_new jk02 new

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡಿ ಒಟ್ಟು ಮೀಸಲಾತಿ ಪ್ರಮಾಣವನ್ನ ರಾಜ್ಯ ಸರ್ಕಾರ ಶೇ 56ಕ್ಕೆ ಏರಿಕೆ ಮಾಡಿತ್ತು.High Court

ಶೈಕ್ಷಣಿಕ ಸಂಸ್ಥೆ ರಾಜ್ಯಾಧೀನ ಸೇವೆಗಳಲ್ಲಿ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿತ್ರಾ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ಈ ಪಿಐಎಸ್ ವಿಚಾರಣೆ ನಡೆಸಿದ  ಹೈಕೋರ್ಟ್  ಸಿಜೆ ವಿಭುಬಖ್ರು ನ್ಯಾಯಾಧೀಶರಾದ ಕೆಎಸ್ ಹೇಮಲೇಖಾ ಅವರಿದ್ದ ಪೀಠವು  ಸರ್ಕಾರ ಮೀಸಲಾತಿ ಪ್ರಮಾಣವನ್ನ ಶೇ 56ಕ್ಕೆ ಏರಿಕೆ ಮಾಡಿದ್ದ ಆದೇಶವನ್ನ ರದ್ದುಪಡಿಸಿದೆ.

 

English Summary
Title

High Court quashes government order increasing reservation from 50% to 56%.

Short Description
Reports indicate that the High Court has struck down the Karnataka government's order increasing the reservation quota for Scheduled Castes and Scheduled Tribes, which had raised the total reservation from 50% to 56%. The state government had previously increased the reservation quota for Scheduled Castes and Scheduled Tribes, thereby raising the total reservation to 56%.
Keywords
SC, ST, High Court, quashes government, order, increasing, reservation, from 50% to 56%.