Monday, October 12, 2026

Dasara Wishes

ನಟ ದರ್ಶನ್ ಗೆ ಜೈಲೇ ಗತಿ: ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ DasraWishes_JK DasraWishes JK
Happy Dasara
Home Front Page ಮತದಾನದ ಹಕ್ಕು ರಕ್ಷಣೆಗೆ ಪ್ರಯತ್ನ: ನ್ಯಾಯಾಧೀಶರನ್ನು ಭೇಟಿ ಮಾಡದೇ ಬೇರೆ ದಾರಿ ಇಲ್ಲ: ಸಿಎಂ ಡಿಕೆಶಿ

ಮತದಾನದ ಹಕ್ಕು ರಕ್ಷಣೆಗೆ ಪ್ರಯತ್ನ: ನ್ಯಾಯಾಧೀಶರನ್ನು ಭೇಟಿ ಮಾಡದೇ ಬೇರೆ ದಾರಿ ಇಲ್ಲ: ಸಿಎಂ ಡಿಕೆಶಿ

ಚೆನ್ನೈ, ಅಕ್ಟೋಬರ್,12,2026 (www.justkannada.in):  ಮುಖ್ಯ ನ್ಯಾಯಮೂರ್ತಿಗಳು ದೇಶದ ಜನರ ಧ್ವನಿಯನ್ನು ಆಲಿಸಬೇಕು. ಚುನಾವಣಾ ಆಯೋಗ ಭೇಟಿಯಾಗಿ ಸ್ಪಂದಿಸದೇ ಇದ್ದಾಗ, ಪ್ರಧಾನಮಂತ್ರಿಗಳು ಕರೆದು ಸಮಸ್ಯೆ ಏನು ಎಂದು ಕೇಳಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡದೇ ಬೇರೆ ದಾರಿ ಇಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಚೆನ್ನೈನಲ್ಲಿ  ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಇಂಡಿಯಾ ಮೈತ್ರಿಕೂಟ ಭೇಟಿಗೆ ಮುಖ್ಯನ್ಯಾಯಮೂರ್ತಿಗಳು ಅವಕಾಶ ನಿರಾಕರಿಸಿರುವುದರ ಬಗ್ಗೆ ಕೇಳಿದಾಗ, “ಸಾರ್ವಜನಿಕ ಜೀವನದಲ್ಲಿ ನಾವು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು  ದೇಶದ ಪ್ರಜಾಪ್ರಭುತ್ವ ಹಾಗೂ ದೇಶದ ಎಲ್ಲಾ ನಾಗರಿಕರ ಮತದಾನದ ಹಕ್ಕು ರಕ್ಷಣೆಗೆ ಪ್ರಯತ್ನಿಸುತ್ತೇವೆ” ಎಂದರು.protect right dks1

“ಮತದಾನದ ಹಕ್ಕು ನಮ್ಮ ಬದುಕಿನ ಹಕ್ಕಾಗಿದೆ. ಅದೇ ನಮ್ಮ ಬದುಕು. ವಿರೋಧ ಪಕ್ಷದ ನಾಯಕರು ದೇಶದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು” ಎಂದು ತಿಳಿಸಿದರು.protect right jk02_new jk02 new

 

English Summary
Title

DK Shivakumar: 'No Option But to Meet CJI' to Protect Right to Vote (68 characters)

Short Description
On October 12, 2026, Karnataka Deputy CM DK Shivakumar asserted that opposition leaders have no option but to meet the Chief Justice of India (CJI) to safeguard democratic values and voting rights. His statements followed reports that the CJI declined an audience with Lok Sabha Leader of the Opposition Rahul Gandhi regarding voter list discrepancies. Equating the right to vote to the right to live, Shivakumar justified the judiciary's intervention after the Election Commission allegedly ignored their representations. The INDIA bloc planned a massive march to the Supreme Court in New Delhi to protest the systematic stripping of citizens' voting rights.
Keywords
protect right, vote, meet, judge, CM, DK Shivakumar