ವಿದೇಶಗಳಲ್ಲೂ ಮೋಡಿ ಮಾಡುತ್ತಿರುವ ‘ಶ‍್ರೀಮನ್ನಾರಾಯಣ’

ಬೆಂಗಳೂರು, ಜನವರಿ 1, 2019 (www.justkannada.in): ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ‍್ರೀಮನ್ನಾರಾಯಣ ಸಿನಿಮಾ ಹೊರದೇಶದಲ್ಲೂ ಮೋಡಿಮಾಡುತ್ತಿದೆ.

ಮಲೇಷ್ಯಾ, ಕೌಲಾಲಂಪುರದಲ್ಲಿ ಬಿಡುಗಡೆಯಾಗಿ ಇದೀಗ ದುಬೈ, ಯುರೋಪ್ ಗೂ ಕಾಲಿಡುತ್ತಿದೆ. ಈ ವಾರಂತ್ಯದಲ್ಲಿ ದುಬೈ ಮತ್ತು ಸ್ಕಾಟ್ ಲ್ಯಾಂಡ್, ಐರ್ಲೆಂಡ್ ಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ.

ಈಗಾಗಲೇ ಆನ್ ಲೈನ್ ಬುಕಿಂಗ್ ಕೂಡಾ ಪ್ರಾರಂಭವಾಗಿದೆ. ಈ ಭಾನುವಾರ ಸ್ಕಾಟ್ ಲ್ಯಾಂಡ್ ಮತ್ತು ಐರ್ಲೆಂಡ್ ನಲ್ಲಿ ಒಂದು ಶೋ ನಡೆಯಲಿದೆ. ಈಗಾಗಲೇ ಮಲೇಷ್ಯಾ, ಕೌಲಾಲಂಪುರದಿಂದ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ.